Posts

Showing posts from May, 2024

ಶ್!!! ಮಾಡಿದೋರ ಪಾಪ ನೋಡಿದೋರಿಗೆ

Image
ಪ್ರಹಸನ - 82 ಶ್!!! ಮಾಡಿದೋರ ಪಾಪ ನೋಡಿದೋರಿಗೆ (ಕೋರ್ಟ್ ಹಾಲ್.. ಪೆನ್ ಡ್ರೈವ್ ಕೇಸ್ ಕುರಿತು ವಿಚಾರಣೆ ನಡೀತಾ ಇದೆ) ವಕೀಲ : ಸ್ವಾಮಿ ಕಟಕಟೆಯಲ್ಲಿ ನಿಂತಿರುವ ಈ ಆರೋಪಿ ಅತೀ ದೊಡ್ಡ ಅಪರಾಧ, ಘನಘೋರ ಅಪರಾಧ ಮಾಡಿದ್ದಾನೆ.. ಹೀಗಾಗಿ ಈತನಿಗೆ ಕಠಿನಾತಿಕಠಿನ ಶಿಕ್ಷೆ ಕೊಡಲೇಬೇಕೆಂದು ಕೇಳಿಕೊಳ್ಳುವೆ. ನ್ಯಾಯಾಧೀಶ : ಅಪರಾಧವಾ? ಅದೂ ಘನಘೋರವಾದದ್ದಾ, ಏನು ಹೇಳಿ? ವಕೀಲ : ಈತ ನೋಡಬಾರದ್ದನ್ನು ನೋಡಿದ್ದಾನೆ ಸ್ವಾಮಿ. ಬೇರೆಯವರು ಖಾಸಗಿಯಾಗಿ ಮಾಡಿಕೊಂಡಿದ್ದ ರತಿ ಕ್ರೀಡಾ ವಿನೋದದ ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ನೋಡಿ ತಪ್ಪು ಮಾಡಿದ್ದಾನೆ. ನ್ಯಾಯಾಧೀಶ : ಅಂದರೆ  ಈತ ನೋಡಿದವ. ಹಾಗಾದರೆ ವಿಡಿಯೋ ಮಾಡಿದವರು ಯಾರು? ವಕೀಲ : ಮಾಡಿದವರಿಗೆ ಶಿಕ್ಷೆ ಆಗಬಹುದು ಬಿಡಬಹುದು ಅದು ಬೇರೆ ವಿಷಯ ಸ್ವಾಮಿ.. ಆದರೆ ಈತ ಅದನ್ನೆಲ್ಲಾ ನೋಡಬಾರದಿತ್ತು ನೋಡಿದ್ದಾನೆ. ನ್ಯಾಯಾಧೀಶ : ಆಯ್ತು ನೋಡಿದ್ದಾಯ್ತು. ನೋಡಬಾರದ್ದಂತಾ ವೀಡಿಯೋ ಮಾಡಿದ್ದು ಯಾರು? ವಕೀಲ : ಅದೇ ಸ್ವಾಮಿ.. ಯಾರು ಆ ರೀತಿ ಕೆಲಸ ಮಾಡಿದ್ದಾರೋ ಅವರೇ ರೀತಿ  ವಿಡಿಯೋ ಕೂಡಾ ಮಾಡಿದ್ದಾರೆ?  ನ್ಯಾಯಾಧೀಶ : ಮಾಡಿದ ಮೇಲೆ ಅದನ್ನೇ ಮತ್ತೆ ಮತ್ತೆ ನೋಡೋ ಚಪಲ ಅದೆಂತದ್ದು. ಹೋಗಲಿ ಎಷ್ಟು ವೀಡಿಯೋ ಇವೆ. ವಕೀಲ : ನೂರಾರು ಹೆಣ್ಮಕ್ಕಳ ಜೊತೆ ಮಾಡಿದ ಮೂರು ಸಾವಿರದಷ್ಟು ವಿಡಿಯೋಗಳು ಇರಬೋದು ಸ್ವಾಮಿ.  ನ್ಯಾಯಾಧೀಶ : ಏನು ಒಬ್ಬನೇ ಇಷ್ಟೊಂದು ಹೆಂಗಸರ ಜೊತೆಗಾ? ಅ...