Posts

Showing posts from April, 2024

ಚೊಂಬೋ ಚೊಂಬು....‌

Image
ಪ್ರಹಸನ - 81  ಚೊಂಬೋ ಚೊಂಬು... ಟಿವಿಯಲ್ಲಿ  ಹಾಡು : ಚೊಂಬೋ ಚೊಂಬು ಕೊಟ್ಟ ಭರವಸೆಯಲ್ಲಾ ಚೊಂಬು ಇಟ್ಟ ವಿಶ್ವಾಸಕ್ಕೆ ಚೊಂಬು 15 ಲಕ್ಷಕ್ಕೆ ಮೂರು ನಾಮ ಚೊಂಬು ವರ್ಷಕ್ಕೆ 2 ಕೋಟಿ ಉದ್ಯೋಗ ಚೊಂಬು ರೈತರ ಆದಾಯ ದ್ವಿಗುಣವೆಂಬುದೂ ಚೊಂಬು ಚೊಂಬೋ ಚೊಂಬು ಕೊಟ್ಟ ಭರವಸೆಯಲ್ಲಾ ಚೊಂಬು ಇಟ್ಟ ವಿಶ್ವಾಸಕ್ಕೆ ದೊಡ್ಡ ಚೊಂಬು ಕಮಲಪತಿ : ಲೇ ಇವಳೇ ಮೊದಲು ಆ ಟಿವಿ ಬಂದ್ ಮಾಡಲು ನಿನ್ನ ಕುಲಪುತ್ರನಿಗೆ ಹೇಳು.. ಚೊಂಬಿನ ಸುದ್ದಿ ಕೇಳಿ ಕೇಳಿ ಸಾಕಾಗಿದೆ.. ಹೆಂಡತಿ : ಏನೋ ಹುಡುಗ ನೋಡ್ಕೊಳ್ಳಲಿ ಬಿಡ್ರಿ. ಟಿವಿಯಲ್ಲಿ ಇದ್ದಿದ್ದು ಇದ್ದಂಗೆ ಹೇಳ್ತಿದ್ದಾರೆ ಅಲ್ವಾ. ಕಮಲಪತಿ : ಏನೇ.. ನೀನೂ ವಿರೋಧ ಪಕ್ಷ ಸೇರಿಕೊಂಡ್ಯಾ.. ಮೊದ್ಲು ನಂಗೆ ಕುಡಿಯೋಕೆ ನೀರು ಕೊಡು. ಹೆಂಡತಿ : ( ಚೊಂಬಲ್ಲಿ ನೀರು ತಂದು ಕೊಡುತ್ತಾಳೆ)  ಕಮಲಪತಿ : ಏನೇ ಏನೇ ಇದು.. ಹೆಂಡತಿ : ಕಣ್ಣಿಗೆ ಕಾಣೋದಿಲ್ವಾ. ಇದು ಚೊಂಬು, ಅದರೊಳಗಿರೋದು ನೀರು. ಕಮಲಪತಿ : ಈಗಾಗಲೇ ವಿರೋಧಿಗಳು ಕೂತಲ್ಲಿ ನಿಂತಲ್ಲಿ ಬಲವಂತಾ ಮಾಡಿ ಚೊಂಬಲ್ಲಿ ನೀರು ಕುಡಿಸ್ತಾವ್ರೆ. ನೀನೂ ಅದನ್ನೇ ಮಾಡ್ತಿಯೇನೇ. ಬೇರೆ ಯಾವುದೂ ಸಿಗಲಿಲ್ವಾ ನೀರು ತರೋಕೆ. ( ಎಂದು  ಚೊಂಬು ಬಿಸಾಕುತ್ತಾನೆ. ಮಗ ಅದನ್ನು ಎತ್ತಿಕೊಳ್ತಾನೆ) ಹೆಂಡತಿ : ಅಯ್ಯಾ.. ದಿನಾಲೂ ಈ ಚೊಂಬಲ್ಲೆ ಅಲ್ವಾ ನೀವು ನೀರು ಕುಡಿಯೋದು. ಚೊಂಬು ಯಾವುದಾದರೇನು ಕುಡಿಯೋಕೆ ನೀರು ಮುಖ್ಯ ಅಲ್ವಾ..  ಕಮಲಪತಿ : ಇನ್ಮೇಲೆ ...