Posts

Showing posts from January, 2024

ಬಸವಣ್ಣಾ ಉಘೇ ಉಘೇ (ಪ್ರಹಸನ -73)

Image
ಪ್ರಹಸನ -73 ಬಸವಣ್ಣಾ ಉಘೇ ಉಘೇ.. ----------------------------- ಒಬ್ಬ : ಕರುನಾಡಿನ ಸಾಂಸ್ಕೃತಿಕ ನಾಯಕನಿಗೆ ಎಲ್ಲರೂ : ಜೈ. ಇನ್ನೊಬ್ಬ : ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲರೂ : ಜೈ ಮತ್ತೊಬ್ಬ : ವೀರಶೈವ ಮಹಾಸಭೆಗೆ ಒಬ್ಬ : ಡಬಲ್ ಜೈ.. ಇನ್ನೊಬ್ಬ : ಲಿಂಗಾಯತ ಮಠದ ಮಾಸ್ವಾಮಿಗಳಿಗೆ ಒಬ್ಬ : ತ್ರಿಬಲ್ ಜೈ. ಮೇಷ್ಟ್ರು : ಹೋಲ್ಡಾನ್ ಹೋಲ್ಡಾನ್. ಏನಿದು ಜೈಕಾರದ ಮೆರವಣಿಗೆ. ಒಬ್ಬ : ಅಷ್ಟೂ ಗೊತ್ತಾಗೋದಿಲ್ವೇನ್ರಿ ಮೇಷ್ಟ್ರೇ. ನಮ್ಮ ಬಸವಣ್ಣನವರನ್ನು ಸಿದ್ದರಾಮಣ್ಣನವರು ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಿದ್ದಾರೆ. ಅದಕ್ಕೇ ಈ ಸಂಭ್ರಮಾಚರಣೆ. ಇನ್ನೊಬ್ಬ : ಬಸವಣ್ಣ ನಮ್ಮ ನಾಯಕ, ಸಾಂಸ್ಕೃತಿಕ ನಾಯಕ,  ಮತ್ತೊಬ್ಬ : ಜೈಕಾರ ಹಾಕೋದು ನಮ್ಮ ಕಾಯಕ. ಮೇಷ್ಟ್ರು : ಆಯ್ತ್ರಪ್ಪಾ ಆಮೇಲೆ ಜೈಕಾರ ಹಾಕೋರಂತೆ. ಮೊದಲು ನನ್ನ ಪ್ರಶ್ನೆಗೆ ಉತ್ತರಾ ಕೊಡಿ. ಒಬ್ಬ : ಥೋ ಈ ಮೇಷ್ಟ್ರಗಳು ಎಲ್ಲಿದ್ರೂ ಪ್ರಶ್ನೆ ಕೇಳೋದೆ ಕೆಲಸಾ. ( ನಾಟಕೀಯವಾಗಿ ಕೈಕಟ್ಟಿಕೊಂಡು ನಿಂತು) ಕೇಳಿ ಗುರುಗಳೇ.. ಮೇಷ್ಟ್ರು : ಅಲ್ರಪ್ಪಾ ಬಸವಣ್ಣ ಬರೀ ನಾಯಕ ಅಲ್ಲಾ ಲಿಂಗಾಯತ ಧರ್ಮದ ಸ್ಥಾಪಕ ಕಣ್ರಯ್ಯಾ.  ಇನ್ನೊಬ್ಬ : ಯಾಕೆ ಮೇಷ್ಟ್ರೇ ಧರ್ಮ ಸ್ಥಾಪಕರು ನಾಯಕರಾಗಬಾರದಾ? ಮೇಷ್ಟ್ರು : ಬುದ್ದ ಧರ್ಮಸ್ಥಾಪಕನೋ ಇಲ್ಲಾ ನಾಯಕನೋ. ಮತ್ತೊಬ್ಬ : ಬೌದ್ಧ ಧರ್ಮ ಸ್ಥಾಪನೆ ಮಾಡಿದ್ದು ಬುದ್ದನೇ ಅಲ್ವಾ ಮೇಷ್ಟ್ರೆ. ಮೇಷ್ಟ್ರು : ಗುರುನಾನಕ್ ರವರು.. ಇನ್ನೊಬ್ಬ ...

ಭಕ್ತಾಂಧರಿಗೆ ಸನ್ಮತಿ ಕೊಡು ರಾಮಾ (ಪ್ರಹಸನ - 71)

Image
ಭಕ್ತಾಂಧರಿಗೆ ಸನ್ಮತಿ ಕೊಡು ರಾಮಾ ( ಮಾಧ್ಯಮದ ಕ್ಯಾಮರಾ ಮುಂದೆ ಭಕ್ತರು ರಾಮಮಂದಿರ ಕುರಿತು ಹೇಳುತ್ತಿದ್ದಾರೆ ) ಭಕ್ತ 1 : ಪ್ರಾಣ ಪ್ರತಿಷ್ಠಾಪನೆಗೆ ಬರಲು ನಿರಾಕರಿಸಿದ ಕಾಂಗ್ರೆಸ್ಸಿನವರು ರಾಮದ್ರೋಹಿಗಳು .  ಪತ್ರಕರ್ತ : ಆಮೇಲೆ . ಭಕ್ತ 2 : ಹಿಂದೂ ಹೃದಯ ಸಿಂಹಾಸನಾಧೀಶ್ವರ ಶ್ರೀರಾಮ ಮಂದಿರದ ವಿರೋಧಿಗಳೆಲ್ಲಾ ಧರ್ಮದ್ರೋಹಿಗಳು . ಪತ್ರಕರ್ತ : ಸರಿ ಆಮೇಲೆ . ಭಕ್ತ 3 : ಇದು ಹಿಂದೂರಾಷ್ಟ್ರ . ರಾಮನೇ ಸಾರ್ವಭೌಮ . ವಿಶ್ವಗುರುವಿನ ಇಷ್ಟದೈವ ರಾಮ . ಇದನ್ನು ವಿರೋಧಿಸುವವರೆಲ್ಲಾ ರಾಷ್ಟ್ರದ್ರೋಹಿಗಳು . ಪತ್ರಕರ್ತ : ಹೌದಾ .. ಅಪೂರ್ಣವಾದ ರಾಮಮಂದಿರ ಉದ್ಘಾಟನೆ ಬೇಡವೆಂದವರು , ಶಾಸ್ತ್ರಸಮ್ಮತವಲ್ಲದ ಆಚರಣೆ ವಿರೋಧಿಸುವವರು , ಚುನಾವಣಾ ಪ್ರಚಾರವಾಗಿ ರಾಮಮಂದಿರ ಬಳಕೆಯಾಗುವುದನ್ನು ಖಂಡಿಸುವವರೆಲ್ಲಾ ರಾಮದ್ವೇಷಿಗಳು , ಧರ್ಮದ್ರೋಹಿಗಳು , ದೇಶದ್ರೋಹಿಗಳು ಹೌದಲ್ವಾ . ಭಕ್ತ 1 : ಹೌದು . ಅಂತವರನ್ನೆಲ್ಲಾ ದೇಶದಿಂದಲೇ ಹೊರಗೆ ಹಾಕಬೇಕು . ಪತ್ರಕರ್ತ : ಹಾಗಾದರೆ ರಾಮಮಂದಿರದ ಉದ್ಘಾಟನೆಯನ್ನು ವಿರೋಧಿಸಿದ ಶಂಕರಾಚಾರ್ಯ ಪೀಠಗಳ ಮಠಾಧಿಪತಿಗಳನ್ನು ಏನು ಮಾಡಬೇಕು ? ಭಕ್ತ 2 : ಜೈ ಶ್ರೀರಾಮ ಪತ್ರಕರ್ತ : ಪ್ರತಿರೋಧ ತೋರುತ್ತಿರುವ ನಿರ್ಮೋಹಿ ಅಖಾಡದವರನ್ನು ಎಲ್ಲಿಗೆ ಓಡಿಸಬೇಕು . ಭಕ್ತ 3 : ಜೈ ಶ್ರೀರಾಮ್ . ಪ...

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

Image
ಪ್ರಾಣ ಪ್ರತಿಷ್ಠಾಪನಾ ಪ್ರಸಂಗ ( ಹೊಸದಾಗಿ ಕಟ್ಟಿದ ಭವ್ಯ ಮಂದಿರದ ಮುಖ್ಯ ಅರ್ಚಕರು ತಮ್ಮ ಮನೆಯ ವರಾಂಡದಲ್ಲಿ ಕೂತು ಸುತ್ತಲೂ ನೆರೆದ ಭಕ್ತರಿಗೆ ದೇವರ ಮಹಿಮೆ ಬಗ್ಗೆ ಪ್ರವಚನ ಕೊಡುತ್ತಿದ್ದಾರೆ ) ಅರ್ಚಕ : ನೋಡಿ ಭಕ್ತರೇ . ಇದು ತುಂಬಾ ಪವರ್ ಪುಲ್ ದೇವರು .‌ ಗರ್ಭಗುಡಿಯಲ್ಲಿರುವ ಮೂರ್ತಿ ಇದೆಯಲ್ಲಾ ಅದಕ್ಕೆ ಜೀವಂತ ಕಳೆ ಬಂದಿದೆ . ಭಕ್ತ 1 : ಎಲ್ಲಾ ಮೂರ್ತಿಗಳನ್ನೂ ಶಿಲ್ಪಿಗಳೇ ತಾನೆ ಕೆತ್ತಿದ್ದು ಅರ್ಚಕರೇ ? ಅರ್ಚಕ : ಹೌದು . ದೇವರು ಶಿಲ್ಪಿಗಳ ಮೈಮನಸಲ್ಲಿ ಅವತರಿಸಿ ಹೀಗೀಗೆ ಮೂರ್ತಿ ಕೆತ್ತಬೇಕು ಅಂತಾ ಆದೇಶಿಸುತ್ತಾನೆ .  ಭಕ್ತ 2 : ಆದರೆ .. ಎಷ್ಟೇ ಆದರೂ ಅದೂ ಕಲ್ಲಿನ ಮೂರ್ತಿ ಅಲ್ವಾ ಆಚಾರ್ಯರೇ . ಆಚಾರ್ಯ : ಹೌದು . ನಿಮ್ಮ ಸಂದೇಹ ಸರಿಯಾಗಿದೆ . ಮೊದಲು ಕಲ್ಲೇ ಆಗಿತ್ತು . ಶಿಲ್ಪಿಯ ಕೈಚಳಕದಲಿ ಮೂರ್ತಿ ಆಯಿತು . ಮಂತ್ರಗಳಿಂದಾಗಿ ದೇವರಾಯಿತು . ಅದು ಹೇಗೆಂದರೆ ನಮ್ಮ ದೇವಸ್ಥಾನಕ್ಕೆ ಆ ನಿರ್ಜೀವ ಮೂರ್ತಿ ತಂದ ಮೇಲೆ ಪವಿತ್ರ ನದಿಗಳ ನೀರಿನಿಂದ ಶುದ್ಧೀಕರಿಸಿ , ಹೋಮ ಹವನ ಯಜ್ಞಾದಿಗಳನ್ನು ಮಾಡಿ , ಮಂತ್ರ ಶಕ್ತಿಯಿಂದಾ ಆ ಮೂರ್ತಿಯ ಒಳಗೆ ಪ್ರಾಣವನ್ನು ಆಹ್ವಾನಿಸಿ ಪ್ರತಿಷ್ಠಾಪನೆ ಮಾಡಿದ್ದೇನೆ .  ಭಕ್ತ 1 : ಅದಕ್ಕೇ ನಮ್ಮ ವಿಗ್ರಹಕ್ಕೆ ಜೀವ ಕಳೆ ಬಂದಿದೆ . ಭಕ್ತ 2 : ನ...