ಭಕ್ತಾಂಧರಿಗೆ ಸನ್ಮತಿ ಕೊಡು ರಾಮಾ (ಪ್ರಹಸನ - 71)

ಭಕ್ತಾಂಧರಿಗೆ ಸನ್ಮತಿ ಕೊಡು ರಾಮಾ


(ಮಾಧ್ಯಮದ ಕ್ಯಾಮರಾ ಮುಂದೆ ಭಕ್ತರು ರಾಮಮಂದಿರ ಕುರಿತು ಹೇಳುತ್ತಿದ್ದಾರೆ)

ಭಕ್ತ 1 : ಪ್ರಾಣ ಪ್ರತಿಷ್ಠಾಪನೆಗೆ ಬರಲು ನಿರಾಕರಿಸಿದ ಕಾಂಗ್ರೆಸ್ಸಿನವರು ರಾಮದ್ರೋಹಿಗಳು

ಪತ್ರಕರ್ತ : ಆಮೇಲೆ.

ಭಕ್ತ 2 : ಹಿಂದೂ ಹೃದಯ ಸಿಂಹಾಸನಾಧೀಶ್ವರ ಶ್ರೀರಾಮ ಮಂದಿರದ ವಿರೋಧಿಗಳೆಲ್ಲಾ ಧರ್ಮದ್ರೋಹಿಗಳು.

ಪತ್ರಕರ್ತ : ಸರಿ ಆಮೇಲೆ.

ಭಕ್ತ 3 : ಇದು ಹಿಂದೂರಾಷ್ಟ್ರ. ರಾಮನೇ ಸಾರ್ವಭೌಮ. ವಿಶ್ವಗುರುವಿನ ಇಷ್ಟದೈವ ರಾಮ. ಇದನ್ನು ವಿರೋಧಿಸುವವರೆಲ್ಲಾ ರಾಷ್ಟ್ರದ್ರೋಹಿಗಳು.

ಪತ್ರಕರ್ತ : ಹೌದಾ..ಅಪೂರ್ಣವಾದ ರಾಮಮಂದಿರ ಉದ್ಘಾಟನೆ ಬೇಡವೆಂದವರು, ಶಾಸ್ತ್ರಸಮ್ಮತವಲ್ಲದ ಆಚರಣೆ ವಿರೋಧಿಸುವವರು, ಚುನಾವಣಾ ಪ್ರಚಾರವಾಗಿ ರಾಮಮಂದಿರ ಬಳಕೆಯಾಗುವುದನ್ನು ಖಂಡಿಸುವವರೆಲ್ಲಾ ರಾಮದ್ವೇಷಿಗಳು, ಧರ್ಮದ್ರೋಹಿಗಳು, ದೇಶದ್ರೋಹಿಗಳು ಹೌದಲ್ವಾ.

ಭಕ್ತ 1 : ಹೌದು. ಅಂತವರನ್ನೆಲ್ಲಾ ದೇಶದಿಂದಲೇ ಹೊರಗೆ ಹಾಕಬೇಕು.

ಪತ್ರಕರ್ತ : ಹಾಗಾದರೆ ರಾಮಮಂದಿರದ ಉದ್ಘಾಟನೆಯನ್ನು ವಿರೋಧಿಸಿದ ಶಂಕರಾಚಾರ್ಯ ಪೀಠಗಳ ಮಠಾಧಿಪತಿಗಳನ್ನು ಏನು ಮಾಡಬೇಕು?

ಭಕ್ತ 2 : ಜೈ ಶ್ರೀರಾಮ

ಪತ್ರಕರ್ತ : ಪ್ರತಿರೋಧ ತೋರುತ್ತಿರುವ ನಿರ್ಮೋಹಿ ಅಖಾಡದವರನ್ನು ಎಲ್ಲಿಗೆ ಓಡಿಸಬೇಕು.

ಭಕ್ತ 3 : ಜೈ ಶ್ರೀರಾಮ್.

ಪತ್ರಕರ್ತ : ಸ್ವಾರ್ಥಕ್ಕಾಗಿ ಪ್ರಚಾರಕ್ಕಾಗಿ ದೇವರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಖಂಡಿಸುತ್ತಿರುವ ಹಿಂದೂ ಮಹಾಸಭಾದವರನ್ನು ಯಾವಾಗ ದೇಶಭ್ರಷ್ಟರನ್ನಾಗಿಸಬೇಕು.

ಭಕ್ತ 1 : ಜೈ ಜೈ ಶ್ರೀರಾಮ.

ಪತ್ರಕರ್ತ : ಪೂಜಾ ಪ್ರಹಸನವನ್ನು ಒಪ್ಪದೇ ಇರುವ ಇಂತಹ ಸಂಘಪರಿವಾರದ ಹಿಂದುತ್ವವಾದಿ ಧರ್ಮದ್ರೋಹಿಗಳಿಗೆ ಎಂತಾ ಶಿಕ್ಷೆ ಕೊಡಬೇಕು?

ಭಕ್ತ  1,2,3 :  ಬೊಲೋ ಶ್ರೀರಾಮ ಚಂದ್ರಕೀ ಜೈ. ಜೈ ಜೈ ರಾಮ, ಜಾನಕಿ ರಾಮ. ರಾಮ ರಾಮ ಜೈಜೈ ರಾಮ. ( ಜೋರಾಗಿ ಭಜನೆ ಶುರು ಮಾಡುತ್ತಾರೆ. ಪತ್ರಕರ್ತನ ಮಾತುಗಳು ಕೇಳದಂತೆ ಶ್ರೀರಾಮನ ಭಜನೆ ಹಾಡು ಜಾಸ್ತಿಯಾಗುತ್ತದೆ.) 

ಪತ್ರಕರ್ತ : ( ಕ್ಯಾಮರಾಮನ್ ಗೆ) ಇವರ ಹಣೇಬರಹಾನೇ ಇಷ್ಟು.   ಕಡೆ ಕ್ಯಾಮರಾ ಹಿಡಿಯೋ. ಸಂಸದ ಸಿಂಹ ಬಂದಿದ್ದಾರೆ.

ಪತ್ರಕರ್ತ : ಸರ ಸರ್.. ಬಿಜೆಪಿ ನಾಯಕರು ಕರ್ನಾಟಕದ ಬರದ ಬಗ್ಗೆ ಮಾತಾಡದೇ ಬರೀ ರಾಮನ ಬಗ್ಗೆ ಮಾತಾಡ್ತಾ ಇದ್ದಾರಲ್ಲಾ..

ಸಿಂಹ : ಪತ್ರಕರ್ತರಾದ ನೀವೂ ಕೂಡಾ ರಾಮಜನ್ಮಭೂಮಿಗೆ ಸಂಬಂಧಿಸಿದ ಒಳ್ಳೊಳ್ಳೆ ಸುದ್ದಿಗಳನ್ನು ಬಿತ್ತರಿಸಿ

ಪರ್ತಕರ್ತಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಕ್ಕೆ ಮನವಿ ಕೊಟ್ಟರೂ..

ಸಿಂಹಅಣ್ಣಾ ಒಂದ್ನಿಮಿಷ ಕೇಳಿಸ್ಕೊಳ್ಳಿ. ಮಾಧ್ಯಮಗಳು ರಾಮನ ಸಂದೇಶವನ್ನ, ಅಯೋಧ್ಯಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಎಳೆಎಳೆಯಾಗಿ ಜನರ ಮುಂದಿರಿಸಿದ್ದೀರಿ ಥ್ಯಾಕ್ಯೂ.. 

ಪತ್ರಕರ್ತ : ಸರ್ ಬರ.. ಅನುದಾನ. ಥೋ ಹೋಗೇ ಬಿಟ್ರಲ್ಲಾ. ಇಂತವರು ಇರುವವರೆಗೂ ದೇಶವನ್ನು ರಾಮನೂ ಕಾಪಾಡಲಾರ. ಅಂಧ ಭಕ್ತರಿಗೆ ಸನ್ಮತಿ ಕೊಡು ರಾಮಾ..

( ಹಿನ್ನಲೆಯಲ್ಲಿ ರಾಮನ ಭಜನೆ)

 

- ಶಶಿಕಾಂತ ಯಡಹಳ್ಳಿ

20-01-2024

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ