ಸಿಂಹಗಳ ಪಜೀತಿ ( ಪ್ರಹಸನ)
ಪ್ರಹಸನ - 76 ಸಿಂಹಗಳ ಪಜೀತಿ (ಝೂನಲ್ಲಿ ಒಂದು ಗಂಡು ಸಿಂಹವನ್ನು ಇನ್ನೊಂದರಲ್ಲಿ ಹೆಣ್ಣು ಸಿಂಹವನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ. ಕೋಣೆಯ ಹೊರಗೆ ನರಿಯೊಂದು ಬಂದು ನಿಂತು) ನರಿ : ಏನು ಕಾಡಿನ ರಾಜರು ಹೇಗಿದ್ದೀರಿ? ಸಿಂಹ : ( ಕೆಕ್ಕರಿಸಿ ನೋಡುತ್ತಾ) ಕಾಡಲ್ಲಿ ರಾಜನಾಗಿದ್ದೆ. ಈಗ ಈ ಕೋಣೆಯಲ್ಲಿ ಬಂಧಿಯಾಗಿರುವೆ. ಕಾಣ್ತಾ ಇಲ್ವಾ. ನರಿ : ಹೋಗಲಿ ನಮ್ಮ ಸಿಂಹಿನಿಯವರು ಹೇಗಿದ್ದಾರೆ? ಸಿಂಹಿನಿ : (ಗುರಾಯಿಸುತ್ತಾ) ಏಯ್ ಅನಿಷ್ಟವೇ. ನಾವಿಬ್ಬರೂ ಬಂಧನದಲ್ಲಿದ್ದರು ಒಂದೇ ಕೋಣೆಯಲ್ಲಿ ಆನಂದಬಾಗಿದ್ದೆವು. ನಮ್ಮನ್ಯಾಕೆ ಬೇರೆ ಬೇರೆ ಮಾಡಿದ್ದಾರೆ ಅದನ್ನು ಬೊಗಳು ಮೊದಲು. ನರಿ : ಅಯ್ಯೋ ಅದೇನು ಅಂತಾ ಹೇಳಲಿ. ಎಲ್ಲಾ ಹೆಸರಿನ ಮಹಿಮೆ. ಈಗ ನಿಮ್ಮ ಹೆಸರು ಏನು ಹೇಳಿ ರಾಜರೇ? ಸಿಂಹ : ನಾನು ಕಾಡಿನ ರಾಜನಾಗಿದ್ದ ಸಿಂಹ. ನರಿ : (ಪಕಪಕನೇ ನಕ್ಕು) ನೋ.. ನಿಮ್ಮ ಹೆಸರು ಸಿಂಹ ಅಲ್ಲಾ. ಅಕ್ಬರ್.. ಅಂತಾ. ಸಿಂಹ : ಯಾರಯ್ಯಾ ಅದು ನನ್ನ ಕೇಳದೇ ನನ್ನ ಹೆಸರು ಬದಲಾಯಿಸಿದವರು. ನರಿ : ಇನ್ಯಾರು.. ಮನುಷ್ಯರು. ನಿಮ್ಮ ಹೆಸರು ಏನು ಅಂತಾ ಗೊತ್ತಾ ಮಹಾರಾಣಿಯವರೇ. ಸಿಂಹಿನಿ : ನನ್ನ ಹೆಸರು ಸಿಂಹಿನಿ. ನರಿ : ( ಮತ್ತೆ ಗಹಗಹಿಸಿ ನಕ್ಕು) ಅಲ್ಲಾ.. ನಿಮ್ಮ ಹೆಸರು ಸೀತಾ.. ಅದನ್ನೂ ಮನುಷ್ಯರೇ ನಾಮಕರಣ ಮಾಡಿದ್ದು. ಸಿಂಹ : (ಗರ್ಜಿಸಿ) ಅವರು ಏನಾದರೂ ಕರೆದುಕೊಳ್ಳಲಿ ನಮಗೇನು. ನಾವು ಸಿಂಹ ಅನ್ನುವುದು ಸುಳ್ಳೆನು? ನರಿ : ಹೌದೌದ...