ಮೆದುಳಿಲ್ಲದ ಕತ್ತೆ ಪ್ರಸಂಗ
ಪ್ರಹಸನ - 79 ಮೆದುಳಿಲ್ಲದ ಕತ್ತೆ ಪ್ರಸಂಗ (ಯಥಾಪ್ರಕಾರ ಅಮವಾಸ್ಯೆಯಂದು ರಾಜಾ ವಿಕ್ರಮಾದಿತ್ಯನು ಸ್ಮಶಾನಕ್ಕೆ ಬಂದು ಹುಣಸೆಮರದ ಕೊಂಬೆಗೆ ನೇತಾಡುತ್ತಿದ್ದ ಬೇತಾಳನನ್ನು ಇಳಿಸಿ ತನ್ನ ಬೆನ್ನ ಮೇಲೆ ಹೊತ್ತು ಮೌನವಾಗಿ ಸಾಗುತ್ತಾನೆ. ಆಗ ಬೇತಾಳವು ರಾಜನನ್ನು ಉದ್ದೇಶಿಸಿ) ಬೇತಾಳ : ರಾಜಾ ಈಗ ಬಂತು ನೋಡು ಮಜಾ. ಈ ಬೇತಾಳನ ಹೊತ್ತೊಯ್ದು ಬೈರಾಗಿಗೆ ಒಪ್ಪಿಸಲು ಮತ್ತೆ ಬಂದೆಯಾ? ಇರಲಿ ಬೈರಾಗಿಯ ಬಳಿ ಹೋಗಿ ತಲುಪುವ ಮುನ್ನ ನಿನ್ನ ಹಾದಿಯ ಬೇಸರವನ್ನು ಕಳೆಯಲು ಕಥೆಯೊಂದನ್ನು ಹೇಳುವೆ ಕೇಳುವಂತವನಾಗು.. ರಾಜಾ ಅದೊಂದು ಕಾಡು. ಆ ಕಾಡಿಗೆ ಬಲಿಷ್ಟನಾದ ಸಿಂಹನೇ ರಾಜ. ರಾಜನಾದ ಮೇಲೆ ಆ ಸಿಂಹ ಬೇಟೆಯಾಡುವುದನ್ನೇ ಮರೆತಿತ್ತು. ಮಂತ್ರಿಯಾಗಿ ಸದಾ ಜೊತೆಗಿರುತ್ತಿದ್ದ ನರಿಯೊಂದು ನಿತ್ಯ ರಾಜನ ಆಹಾರಕ್ಕೆ ವ್ಯವಸ್ಥೆ ಮಾಡುತ್ತಿತ್ತು. ಏನು ಮಾಡುತ್ತಿತ್ತು? ವಿಕ್ರಮ : (ಮೌನವಾಗಿದ್ದ) ಬೇತಾಳ : ಸರಿ ಮುಂದೆ ಕೇಳುವಂತವನಾಗು. ಒಮ್ಮೆ ಕಾಡಿನ ರಾಜನಿಗೆ ಜೋರಾಗಿ ಹಸಿವೆಯಾಯ್ತು. "ನನಗೆ ಹಸಿವಾಗಿದೆ. ಏನಾದರೂ ತಿನ್ನಲು ತಂದು ಕೊಡು" ಎಂದು ಮಂತ್ರಿ ನರಿಗೆ ಆಜ್ಞಾಪಿಸಿತು. ಆ ಕುತಂತ್ರಿ ನರಿ ಒಂದು ಕತ್ತೆಯ ಬಳಿ ಹೋಗಿ ಹೇಳಿತು: "ಸಿಂಹ ರಾಜನಿಗೆ ವಯಸ್ಸಾಗಿದೆ. ನಿನ್ನಂತಹ ನಿಷ್ಠಾವಂತನಿಗೆ ಪಟ್ಟ ಕಟ್ಟುತ್ತಾರಂತೆ. ನೀನೇ ಈ ಕಾಡಿನ ರಾಜನಾಗುವಂತೆ ಬಾ ನನ್ನ ಜೊತೆ." ಎಂದು ಹೇಳಿದಾಗ ಕತ್ತೆ ಸಂತಸದಿಂದ ಒಪ್ಪಿ ಕಿರು...