ಹೈಸ್ಪೀಡ್ ರೈಲು ಬಂತು ರೈಲು ( ಪ್ರಹಸನ-30) ***************************************** (ವಿಶ್ವಗುರುವಿನ ಅಂಧ ಭಕ್ತ ಮತ್ತು ಕಾಮನ್ ಮ್ಯಾನ್ ವ್ಯಕ್ತಿ ರೈಲು ನಿಲ್ದಾಣವೊಂದರಲ್ಲಿ ಬೇಟಿಯಾಗುತ್ತಾರೆ) ಭಕ್ತ : ಒಂದೇ ಭಾರತ್ ಮಾತಾಕೀ ಜೈ.. ವ್ಯಕ್ತಿ : ತಪ್ಪು, ಅದು ಬರೀ ಭಾರತ್ ಮಾತಾಕೀ ಜೈ ಅಷ್ಟೆಯಾ? ಭಕ್ತ : ಅದು ನಂಗೂ ಗೊತ್ತು. ಆದರೆ ಇದು ಅದಲ್ಲಾ, ವಿಶ್ವಗುರುಗಳ ಕನಸಿನ ರೈಲು. ಒಂದೇ ಭಾರತ್ ಸೂಪರ್ ಸ್ಪೀಡ್ ರೈಲು. ವ್ಯಕ್ತಿ : ಹೋ ಅದಾ.. ಬುಲೆಟ್ ರೈಲು ಬಿಡ್ತಾರೇ ಅಂತಾ ಅನ್ಕೊಂಡಿದ್ದೆ, ಸಧ್ಯ ಇದನ್ನಾದರೂ ಬಿಟ್ಟರಲ್ಲಾ. ಭಕ್ತ : ಅದೂ ಬರುತ್ತೆ. ಈಗ ಈ ರೈಲಲ್ಲಿ ಹೋದ್ರಾಯ್ತು. ಎಂಥಾ ಟ್ರೇನು ಅಂತಿಯಾ? ಅದರ ಲುಕ್ ಏನು, ಖದರ್ ಏನು? ಸ್ವಚ್ಚತೆ ಏನು? ಅದರಲ್ಲಿ ಪ್ರಯಾಣ ಮಾಡೋದೇ ಒಂದು ಸೌಭಾಗ್ಯ. ಪೂರ್ವ ಜನುಮದ ಪುಣ್ಯ. ಎಲ್ಲಾ ನಮೋ ಮಹಾತ್ಮರ ಕೃಪೆ. ವ್ಯಕ್ತಿ : ಹೌದೌದು ಅವರದೇ ಕೃಪೆ. ಆದರೆ ಇದು ಬರೀ ಶ್ರೀಮಂತರಿಗಾಗಿ ಮಾತ್ರವಂತೆ. ಮೆಜೆಸ್ಟಿಕ್ ನಿಂದ ಯಶವಂತಪುರಕ್ಕೆ ಇರೋ ಆರು ಕಿಲೋಮೀಟರಿಗೆ 410 ರೂಪಾಯಿ ಅಂತೆ. ಭಕ್ತ : ಅಷ್ಟೇ.. ಆದರೆ ಎಂತಾ ಮಜಾ ಕೊಡುತ್ತೆ ಗೊತ್ತಾ? ಆಹಾ ವ್ಯಕ್ತಿ : ಬೆಂಗಳೂರಿಂದ ಧಾರವಾಡಕ್ಕೆ 2000 ರೂ. ಚಾರ್ಜಂತೆ. ಭಕ್ತ : ಅಷ್ಟೇ. ಒಂದೂವರೆ ಗಂಟೆ ಮುಂಚೆನೇ ಹೋಗಿ ಮುಟ್ಟಬಹುದು. ಸಮಯಾನೂ ಉಳಿಯುತ್ತೆ ಜೊತೆಗೆ ಮಜಾನೂ ಬರುತ್ತೆ. ಹೆಂಗೆ ನಮ್ಮ ದೇವರ ಉಪಾಯ. ವ್ಯಕ್ತಿ : ನಿಮ್ಮ ದೇವರಿಗೊಂದು ನಮಸ್ಕಾರ ಇರ್ಲಿ. ಭಕ್ತ : ಮತ್ತೆ ಇದೇನು ಡಬ್ಬಾ ರೈಲು ಅಲ್ಲಾರೀ. ಸೂಪರ್ ಡೂಪರ್ ಎಸಿ ರೈಲು. ದಿನಾ ಧಾರವಾಡಕ್ಕೆ ಹೋಗಿ ಪೇಡಾ ತಿಂದು ವಾಪಸ್ ಬರಬೋದು. ವ್ಯಕ್ತಿ : ಬರಬಹುದು, ನಿಮ್ಮ ದೇವರು ಮಾತು ಕೊಟ್ಟಂತೆ ಸ್ವಿಸ್ ಬ್ಯಾಂಕಿಂದಾ ಕಪ್ಪು ಹಣ ತಂದು ನನ್ನ ಅಕೌಂಟಿಗೆ 15 ಲಕ್ಷ ಹಾಕಿದ್ರೆ ಅದನ್ನ ಬ್ಯಾಂಕಲ್ಲಿಟ್ಟು ಬರೋ ಬಡ್ಡಿಯಲ್ಲಿ ಈ ರೈಲು ಏರಬಹುದು ಇಳಿಬಹುದು. ಭಕ್ತ : ಹೇ ಏನ್ ಮಾತು ಅಂತಾ ಆಡ್ತೀರಾ? ವ್ಯಕ್ತಿ : ಇದ್ದಿದ್ದನ್ನೇ ಹೇಳ್ತೀನಿ. ಒಂದೇ ಭಾರತ ರೈಲಲ್ಲಿ ಎಲ್ಲರೂ ಹೋಗಬಹುದು. ಯಾವಾಗ ಮಾತು ಕೊಟ್ಟಂತೆ ನಿಮ್ಮ ಭಗವಂತಾ ರೈತರ ಆದಾಯ ದುಪ್ಪಟ್ಟು ಮಾಡ್ತಾರೋ ಆಗ ರೈತರೂ ಈ ರೈಲು ಸವಾರಿ ಮಾಡಬಹುದು. ಭಕ್ತ : ಇದು ಅತಿಯಾಯ್ತು. ವ್ಯಕ್ತಿ : ಇದರಲ್ಲಿ ಅತೀ ಏನಿದೆ, ಎಲ್ಲಾ ಮಿತಿಯಾಗೇ ಇದೆ. ಯಾವಾಗ ವರ್ಷಕ್ಕೆರಡು ಕೋಟಿ ಯುವಕರಿಗೆ ನಿಮ್ಮ ದೊರೆ ಮಾತುಕೊಟ್ಟಂತೆ ಉದ್ಯೋಗ ಕೊಡ್ತಾರೋ ಆಗ ಯುವಜನರು ಈ ರೈಲಲ್ಲೇ ಕೆಲಸಕ್ಕೆ ಹೋಗಬಹುದು. ಭಕ್ತ : ಇದು ಉದ್ಧಟತನದ ಮಾತು. ವ್ಯಕ್ತಿ : ಈ ದೇಶದ ಎಲ್ಲರಿಗೂ ಭರವಸೆ ಕೊಟ್ಟಂತೆ ನಿಮ್ಮ ವಿಶ್ವಗುರು ಪಕ್ಕಾ ಮನೆ ಕಟ್ಟಿಕೊಟ್ಟು ಮನೆಮನೆಗೆ ನಲ್ಲಿ ಹಾಕಿಸಿ ನೀರು ಬಿಡ್ತಾರೋ ಆಗ ಆರಾಮಾಗಿ ಈ ರೈಲಲ್ಲಿ ಪ್ರಯಾಣ ಮಾಡಬೋದು. ಭಕ್ತ : ಇದೆಂತಾ ಅಧಿಕ ಪ್ರಸಂಗತನ. ನಮ್ಮ ದೇವರು ನಿಮಗಾಗಿ ಏನೂ ಮಾಡಿಲ್ಲಾ ಅಂತಾ ಕೇಳೋದೇ ದೇಶದ್ರೋಹ. ನೀನು ಈ ದೇಶಕ್ಕೆ ಏನು ಮಾಡಿದ್ದೀಯಾ ಮಾಡ್ತಿದ್ದೀಯಾ ಅನ್ನೋದು ದೇಶಪ್ರೇಮ. ಮೈಂಡ್ ಇಟ್.. ಬಿಟ್ಟಿ ಭಾಗ್ಯದಿಂದ ಬದುಕೋ ಭಿಕ್ಷುಕರು ನೀವು, ನಮ್ಮ ಭಗವಂತನ ಬಗ್ಗೆ ಟೀಕೆ ಮಾಡ್ತೀರಾ? ಹೌ ಡೇರ್ ಆರ್ ಯು. ವ್ಯಕ್ತಿ : ಯೋ.. ಪ್ರತಿಯೊಂದಕ್ಕೂ ನಾನು ನನ್ನಂತವರು ಕಟ್ಟೋ ತೆರಿಗೆಯಿಂದ ಕಣಲೇ ನಮಗೆ ಭಾಗ್ಯಗಳನ್ನ ಕೊಡ್ತಿರೋದು. ಅವು ಭಿಕ್ಷೆಯಲ್ಲಾ ನಮ್ಮ ಹಕ್ಕು ತಿಳ್ಕೋ, ಸಾಧ್ಯವಾದರೆ ಬಿಟ್ಟಿ ಭಾಗ್ಯಗಳಿಂದಾ ದೇಶ ದಿವಾಳಿ ಆಗುತ್ತೆ ಅಂತಾ ಹೇಳಿದ ಆ ಬಡವರ ವಿರೋಧಿ ವಿಶ್ವಗುರುವಿಗೂ ತಿಳಿಸು. ಭಕ್ತ : ಇದು ದೇಶದ್ರೋಹ. ನೀನು ಯಾಕೆ ನಗರ ನಕ್ಸಲ್ಲರ ತರಾ ಮಾತಾಡ್ತಿದ್ದೀ. ವ್ಯಕ್ತಿ : ನೋಡಯ್ಯಾ ಭಕ್ತಾಸುರಾ. ನಮಗೆ ಬೇಕಾಗಿರೋದು ಕೈಗೆ ಕೆಲಸ, ಬೆಳೆದ ಬೆಳೆಗೆ ತಕ್ಕ ಬೆಲೆ, ಶ್ರಮಕ್ಕೆ ತಕ್ಕ ಕೂಲಿ. ಸಮಾನ ಶಿಕ್ಷಣ, ಎಲ್ಲರಿಗೂ ಉಚಿತ ಆರೋಗ್ಯ ಅಷ್ಟೇ. ನಮಗೆ ಈ ಬಿಲ್ಡಪ್ ರೈಲುಗಳೂ ಬೇಕಿಲ್ಲಾ, ಕಂಬಿನೇ ಇಲ್ಲದೇ ರೈಲು ಬಿಡೋ ಬೊಗಳೆ ದಾಸಯ್ಯಗಳೂ ಬೇಕಿಲ್ಲಾ. ಭಕ್ತ : ಇದು ನಮ್ಮ ದೇವರಿಗೆ ನೀನು ಮಾಡ್ತಿರೋ ಅಪಮಾನ. ಇದನ್ನ ನಾವು ಸಹಿಸೋದಿಲ್ಲ. ವ್ಯಕ್ತಿ : ಸಹಿಸೋಕಾಗದಿದ್ರೆ ಮೂರು ಮುಚ್ಕೊಂಡು ಹೋಗಿ ಭಜನೆ ಮಾಡು. ವಂದೇ ಭಾರತ್ ರೈಲಂತೆ. ಬುಲೆಟ್ ಟ್ರೇನಂತೆ. ಇವುಗಳಿಂದ ಬಡವರಿಗೆ ಏನಾದ್ರೂ ಉಪಯೋಗ ಇದೆ ಏನಯ್ಯಾ ಬಕೆಟ್ ಭಕ್ತಾ. ಎಕ್ಸಪ್ರೆಸ್ ರಸ್ತೆ ಮಾಡೋದು ದುಬಾರಿ ಟೋಲ್ ವಸೂಲಿ ಮಾಡೋದು. ಹೈಪೈ ಟ್ರೇನ್ ಬಿಡೋದು ದುಬಾರಿ ದರ ಕೀಳೋದು. ಇದೇನಾ ನಿಮ್ಮ ದೊರೆಗಳು ಅಭಿವೃದ್ದಿ ಹೆಸರಲ್ಲಿ ಲೂಟಿ ಮಾಡೋ ಯೋಜನೆಗಳು. ಭಕ್ತ : ಛೇ ಇದೆಂತಾ ಚೀಪ್ ಮೆಂಟಲಿಟಿ ಇದು. ನಮ್ಮ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಿದೆ. ನಮ್ಮ ದೇವರು ಇಡೀ ಜಗತ್ತಿಗೆ ವಿಶ್ವಗುರು ಆಗಿದ್ದಾರೆ. ಅದಕ್ಕಾಗಿ ಎಲ್ಲದರಲ್ಲೂ ಅಂತರಾಷ್ಟ್ರೀಯ ಸ್ಟ್ಯಾಂಡರ್ಡ್ ಮೆಂಟೇನ್ ಮಾಡಬೇಕಾಗುತ್ತೆ. ಆಮೆ ಹಾಗೇ ತೆವಳುವ ಹಳೇ ಡಬ್ಬಾ ರೈಲಿನ ಕಾಲ ಹೋಯ್ತು. ಇನ್ನೇನಿದ್ದರೂ ಹೈಪೈ ಹೈಸ್ಪೀಡ್ ಟ್ರೇನ್ ಯುಗ. ಮೊದಲು ನಿನ್ನಂತೋರು ಅಪ್ಡೇಟ್ ಆಗಬೇಕು ಆಗಲೇ ನಮ್ಮ ದೇಶ ಇಂಟರ್ ನ್ಯಾಶನಲ್ ಆಗೋದು. ವ್ಯಕ್ತಿ : ಯೋ ಏನಯ್ಯಾ ಅಪ್ಡೇಟ್ ಆಗೋದು ನಿನ್ನ ತಲೆ. ಮೊದಲು ಬಡಜನರ ಬದುಕು ಅಪ್ಡೇಟ್ ಮಾಡ್ರಯ್ಯಾ? ದೇಶದ ಸಂಪತ್ತನ್ನು ಆದಾನಿ ಅಂಬಾನಿಯಂತಾ ತಿಮಿಂಗಿಲಗಳ ಗೋದಾಮಲ್ಲಿ ಕೂಡಿ ಹಾಕಿದರೆ ಜನರ ಸಂಪಾದನೆ ಅದೆಂಗೆ ಅಪ್ಡೇಟ್ ಆಗುತ್ತೆ. ಬೀಜ ಗೊಬ್ಬರ ಪೆಟ್ರೋಲ್ ಡೀಸಲ್ ಬೆಲೆ ಏರಿಸಿದ್ರೆ ಹೇಗೆ ರೈತರ ಬದುಕು ಅಪ್ಡೇಟ್ ಆಗುತ್ತೆ. ಗ್ಯಾಸ್ ಸಿಲಿಂಡರ ಬೆಲೆ ಮೂರು ಪಟ್ಟು ಹೆಚ್ಚು ಮಾಡಿದ್ರೆ ಮಹಿಳೆಯರ ಮನೆ ಖರ್ಚು ಅದು ಹೇಗೆ ಅಪ್ಡೇಟ್ ಆಗುತ್ತೆ. ಜನರನ್ನ ಬಡತನಕ್ಕೆ ನೂಕಿ ಹೈಟೆಕ್ ಟ್ರೇನು ಹತ್ತಿ ಅಂದ್ರೆ ಹೇಗಯ್ಯಾ? ಜನರ ಹತ್ರ ಎಲ್ಲಿದೆ ಕಾಸು? ಎಲ್ಲಿದೆ ಸಂಪಾದನೆ? ಎಲ್ಲಿದೆ ಉದ್ಯೋಗ? ಭಕ್ತ : ದೇಶಕ್ಕಾಗಿ ಎಲ್ಲಾ ರೀತಿ ತ್ಯಾಗ ಮಾಡಿದಾಗಲೇ ದೇಶ ಮುಂದುವರೆಯುತ್ತದೆ ಗೊತ್ತಾ. ವ್ಯಕ್ತಿ : ಹೌದಯ್ಯಾ ಹೌದು. ನಾವು ನಮ್ಮ ಹೊಟ್ಟೆ ಬಟ್ಟೆ ಬಿಟ್ಟು, ಮಕ್ಕಳ ಶಿಕ್ಷಣ, ಮನೆ ಮಕ್ಕಳ ಭವಿಷ್ಯ ಅಷ್ಟೇ ಯಾಕೆ ಬದುಕನ್ನೇ ದೇಶಕ್ಕಾಗಿ ತ್ಯಾಗ ಮಾಡ್ತೇವೆ, ಅಲ್ಲಿ ಆ ನಿಮ್ಮ ದೇವರು ಕಾರ್ಪೋರೇಟ್ ಕಂಪನಿಗಳಿಗೆ ಕೇಳಿದ್ ವರ ಕೊಟ್ಟು ದೇಶವನ್ನ ದಿವಾಳಿ ಮಾಡ್ತಾ ಹೋಗಲಿ. ಭಕ್ತ : ಬೆಲೆ ಎಷ್ಟೇ ಏರಲಿ, ಏನೇ ಕಷ್ಟ ಬರಲಿ, ನಮ್ಮ ದೇವರಿಗಾಗಿ ನಾವು ಏನ್ ಬೇಕಾದರೂ ಎದುರಿಸೋಕೆ ಸಿದ್ದರಾಗಿದ್ದೇವೆ. ಯಾಕಂದ್ರೆ ನಮಗೆ ದೇಶಮುಖ್ಯ, ವಿಶ್ವಗುರುಗಳು ಹೇಳಿದ್ದೆ ನಮಗೆ ವೇದವಾಕ್ಯ. ವ್ಯಕ್ತಿ : ತೊ ಥೋ.. ನಿಮ್ಮ ಗುಲಾಮಗಿರಿ ನಿನ್ನತ್ರಾ ಇಟ್ಕೊಳ್ಳಯ್ಯಾ. ದೇಶ ಅಂದ್ರೆ ಹೈಟೆಕ್ ಟ್ರೇನ್ ಎರೋಪ್ಲೇನ್ ಅಲ್ಲಯ್ಯಾ, ದೇಶ ಅಂದ್ರೆ ಐಶಾರಾಮಿ ಹೋಟೆಲು, ಅತೀ ದೊಡ್ಡ ಪ್ರತಿಮೆ, ಹೊಸ ಸಂಸತ್ ಭವನಗಳು ಅಲ್ರಯ್ಯಾ. ದೇಶ ಅಂದ್ರೆ ಅಲ್ಲಿ ವಾಸ ಮಾಡೋ ಜನಗಳು. ದೇಶ ಸಮೃದ್ದ ಆಗಬೇಕಂದ್ರೆ ಜನರಿಗೆ ಸಂಪನ್ಮೂಲಗಳ ಸಮಾನ ಹಂಚಿಕೆ ಆಗಬೇಕು. ಜನರು ನೆಮ್ಮದಿಯಾಗಿದ್ರೆ ದೇಶ ನೆಮ್ಮದಿಯಾಗಿರುತ್ತೆ. ಜನರೇ ಸಂಕಷ್ಟದಲ್ಲಿದ್ದರೆ ದೇಶದಲ್ಲಿ ದಂಗೆ ಏಳುತ್ತೆ, ಅರಾಜಕತೆ ಹೆಚ್ಚಾಗುತ್ತೆ. ಭಕ್ತ : ನೋಡ್ರಪ್ಪಾ ನೋಡಿ. ಇವನೊಬ್ಬ ಭಯೋತ್ಪಾದಕ ದಂಗೆ ಮಾಡ್ತಾನಂತೆ. ಇವನೊಬ್ಬ ದೇಶದ್ರೋಹಿ ಅರಾಜಕತೆ ಸೃಷ್ಟಿ ಮಾಡ್ತಾನಂತೆ. ನಕ್ಸಲ್ ಈತ. ಇಂತವರನ್ನ ಸುಮ್ಮನೇ ಬಿಡಬಾರದು. ಏನು ನೋಡ್ತಾ ನಿಂತಿದ್ದೀರಿ? ಹಿಡೀರಿ ಹೊಡೀರಿ ಕೊಂದಾಕಿ ಈ ದೇಶದ್ರೋಹಿಯನ್ನ. ಇನ್ನೊಬ್ಬ : ಆಗಿನಿಂದ ಎಲ್ಲಾ ಮಾತು ಕೇಳಿಸ್ಕೊಂಡ್ವಿ. ಅವನೇನಯ್ಯಾ ತಪ್ಪು ಹೇಳಿದ್ದಾನೆ. ಮತ್ತೊಬ್ಬ : ಊಟಕ್ಕಿಲ್ಲದ ಉಪ್ಪಿನಕಾಯಿ ಡ್ಯಾಶ್ ಡ್ಯಾಶ್ ಗೆ ಯಾಕಂತೆ. ಜನರಿಗೆ ಊಟ ಇಲ್ಲಾ, ಉದ್ಯೋಗ ಇಲ್ಲಾ, ಈ ದ್ವೇಷ ಹುಟ್ಟಿಸೋ ಜನರಿಂದಾ ನೆಮ್ಮದಿ ಇಲ್ಲಾ. ಐಶಾರಾಮಿ ಟ್ರೇನ್ ಬಿಡ್ತಾರಂತೆ. ಇಕ್ರೋ ಇವನ ಮೂತಿಗೆ. ಮಹಿಳೆ : ಇಂತಾ ಗುಲಾಮರಿಂದಲೇ ಈ ದೇಶ ಸರ್ವಾಧಿಕಾರಿ ಕೈಗೆ ಹೋಗಿದ್ದು. ಮೊದಲು ಇಂತವರಿಗೆ ಬಹಿಷ್ಕಾರ ಹಾಕಿ ಓಡಿಸಿ. ಭಕ್ತ : ಹೀಗೆಲ್ಲಾ ಹೊಡಿಯೋದು ದೇಶದ್ರೋಹ. ಹಲ್ಲೆ ಮಾಡೋದು ಧರ್ಮದ್ರೋಹ. ನಮ್ಮ ದೇವರ ಭಕ್ತರು ನಿಮ್ಮನ್ನ ಸುಮ್ಕೆ ಬಿಡೋದಿಲ್ಲ. ಸೇಡು ತೀರಿಸ್ಕೊಂತಾರೆ. ಎಲ್ಲರೂ : ಹಿಡ್ಕೊಳ್ರೋ. ಹೊಡೀರಿ. ಕಂತ್ರಿ ಗುಲಾಮ ನಾಯಿನ ಓಡಿಸ್ರಿ. ( ಎಲ್ಲರೂ ಹೊಡೆದು, ಅಂಗಿ ಹರಿದು, ಥೂ ಅಂತಾ ಉಗಿದು ಓಡಿಸ್ತಾರೆ. ಭಕ್ತ : ( ನರಳುತ್ತಾ ಕುಂಟುತ್ತಾ) ಒಂದೇ ಭಾರತ್, ಒಂದೇ ಮಾತರಂ, ಒಂದೇ ದೇವರು, ಒಂದೇ ಧರ್ಮ ( ಎನ್ನುತ್ತಾ ನಡೆಯಲಾಗದೇ ಕುಸಿದು ಬೀಳುತ್ತಾನೆ) ಹಿನ್ನೆಲೆಯಲ್ಲಿ ಹಾಡು.. ದೇಶವೆಂದರೆ ಕಲ್ಲು ಮಣ್ಣು ಇಮಾರತು ಪ್ರತಿಮೆಗಳಲ್ಲ ಅಲ್ಲಾ ಅಲ್ಲಾ ಅಲ್ಲವೇ ಅಲ್ಲಾ.. ಬಾಳಿ ಬದುಕುವ ಜನರು.. ಆಹಾ ಜನರು ದೇಶವೆಂದರೆ ವಿಮಾನ ಬಸ್ಸು ಬುಲೆಟ್ ಟ್ರೇನುಗಳಲ್ಲ ಅಲ್ಲಾ ಅಲ್ಲಾ ಅಲ್ಲವೇ ಅಲ್ಲಾ.. ಸರ್ವ ಜನಾಂಗದ ಶಾಂತಿಯ ತೋಟ ತೋಟ ತೋಟ ಹೂದೋಟ *- ಶಶಿಕಾಂತ ಯಡಹಳ್ಳಿ*

 ಪ್ರಹಸನ-30)

ಹೈಸ್ಪೀಡ್ ರೈಲು ಬಂತು ರೈಲು   

*****************************************

 

 

(ವಿಶ್ವಗುರುವಿನ ಅಂಧ ಭಕ್ತ ಮತ್ತು ಕಾಮನ್ ಮ್ಯಾನ್ ವ್ಯಕ್ತಿ ರೈಲು ನಿಲ್ದಾಣವೊಂದರಲ್ಲಿ ಬೇಟಿಯಾಗುತ್ತಾರೆ)

 

ಭಕ್ತ : ಒಂದೇ ಭಾರತ್ ಮಾತಾಕೀ ಜೈ..

 

ವ್ಯಕ್ತಿ : ತಪ್ಪು, ಅದು ಬರೀ ಭಾರತ್ ಮಾತಾಕೀ ಜೈ ಅಷ್ಟೆಯಾ

 

ಭಕ್ತ : ಅದು ನಂಗೂ ಗೊತ್ತು. ಆದರೆ ಇದು ಅದಲ್ಲಾ, ವಿಶ್ವಗುರುಗಳ ಕನಸಿನ ರೈಲು. ಒಂದೇ ಭಾರತ್ ಸೂಪರ್ ಸ್ಪೀಡ್ ರೈಲು

 

ವ್ಯಕ್ತಿ : ಹೋ ಅದಾ.. ಬುಲೆಟ್ ರೈಲು ಬಿಡ್ತಾರೇ ಅಂತಾ ಅನ್ಕೊಂಡಿದ್ದೆ, ಸಧ್ಯ ಇದನ್ನಾದರೂ ಬಿಟ್ಟರಲ್ಲಾ

 

ಭಕ್ತ : ಅದೂ ಬರುತ್ತೆ. ಈಗ ರೈಲಲ್ಲಿ ಹೋದ್ರಾಯ್ತು. ಎಂಥಾ ಟ್ರೇನು ಅಂತಿಯಾ? ಅದರ ಲುಕ್ ಏನು, ಖದರ್ ಏನು? ಸ್ವಚ್ಚತೆ ಏನು? ಅದರಲ್ಲಿ ಪ್ರಯಾಣ ಮಾಡೋದೇ ಒಂದು ಸೌಭಾಗ್ಯ. ಪೂರ್ವ ಜನುಮದ ಪುಣ್ಯ. ಎಲ್ಲಾ ನಮೋ ಮಹಾತ್ಮರ ಕೃಪೆ.

 

ವ್ಯಕ್ತಿ : ಹೌದೌದು ಅವರದೇ ಕೃಪೆ. ಆದರೆ ಇದು ಬರೀ ಶ್ರೀಮಂತರಿಗಾಗಿ ಮಾತ್ರವಂತೆ. ಮೆಜೆಸ್ಟಿಕ್ ನಿಂದ ಯಶವಂತಪುರಕ್ಕೆ ಇರೋ ಆರು ಕಿಲೋಮೀಟರಿಗೆ  410 ರೂಪಾಯಿ ಅಂತೆ

 

ಭಕ್ತ : ಅಷ್ಟೇ.. ಆದರೆ ಎಂತಾ ಮಜಾ ಕೊಡುತ್ತೆ ಗೊತ್ತಾ? ಆಹಾ

 

ವ್ಯಕ್ತಿ : ಬೆಂಗಳೂರಿಂದ ಧಾರವಾಡಕ್ಕೆ 2000 ರೂ. ಚಾರ್ಜಂತೆ.

 

ಭಕ್ತ : ಅಷ್ಟೇ. ಒಂದೂವರೆ ಗಂಟೆ ಮುಂಚೆನೇ ಹೋಗಿ ಮುಟ್ಟಬಹುದು. ಸಮಯಾನೂ ಉಳಿಯುತ್ತೆ ಜೊತೆಗೆ ಮಜಾನೂ ಬರುತ್ತೆ. ಹೆಂಗೆ ನಮ್ಮ ದೇವರ ಉಪಾಯ.

 

ವ್ಯಕ್ತಿ : ನಿಮ್ಮ ದೇವರಿಗೊಂದು ನಮಸ್ಕಾರ ಇರ್ಲಿ

 

ಭಕ್ತ : ಮತ್ತೆ ಇದೇನು ಡಬ್ಬಾ ರೈಲು ಅಲ್ಲಾರೀ. ಸೂಪರ್ ಡೂಪರ್ ಎಸಿ ರೈಲು. ದಿನಾ ಧಾರವಾಡಕ್ಕೆ ಹೋಗಿ ಪೇಡಾ ತಿಂದು ವಾಪಸ್ ಬರಬೋದು.

 

ವ್ಯಕ್ತಿ : ಬರಬಹುದು, ನಿಮ್ಮ ದೇವರು ಮಾತು ಕೊಟ್ಟಂತೆ ಸ್ವಿಸ್ ಬ್ಯಾಂಕಿಂದಾ ಕಪ್ಪು ಹಣ ತಂದು  ನನ್ನ ಅಕೌಂಟಿಗೆ 15 ಲಕ್ಷ ಹಾಕಿದ್ರೆ ಅದನ್ನ ಬ್ಯಾಂಕಲ್ಲಿಟ್ಟು ಬರೋ ಬಡ್ಡಿಯಲ್ಲಿ ರೈಲು ಏರಬಹುದು ಇಳಿಬಹುದು

 

ಭಕ್ತ : ಹೇ ಏನ್ ಮಾತು ಅಂತಾ ಆಡ್ತೀರಾ?

 

ವ್ಯಕ್ತಿ : ಇದ್ದಿದ್ದನ್ನೇ ಹೇಳ್ತೀನಿ. ಒಂದೇ ಭಾರತ ರೈಲಲ್ಲಿ ಎಲ್ಲರೂ ಹೋಗಬಹುದು. ಯಾವಾಗ ಮಾತು ಕೊಟ್ಟಂತೆ ನಿಮ್ಮ ಭಗವಂತಾ ರೈತರ ಆದಾಯ ದುಪ್ಪಟ್ಟು ಮಾಡ್ತಾರೋ ಆಗ ರೈತರೂ ರೈಲು ಸವಾರಿ ಮಾಡಬಹುದು.

 

ಭಕ್ತ : ಇದು ಅತಿಯಾಯ್ತು.

 

ವ್ಯಕ್ತಿ : ಇದರಲ್ಲಿ ಅತೀ ಏನಿದೆ, ಎಲ್ಲಾ ಮಿತಿಯಾಗೇ ಇದೆ. ಯಾವಾಗ ವರ್ಷಕ್ಕೆರಡು ಕೋಟಿ ಯುವಕರಿಗೆ ನಿಮ್ಮ ದೊರೆ ಮಾತುಕೊಟ್ಟಂತೆ ಉದ್ಯೋಗ ಕೊಡ್ತಾರೋ ಆಗ ಯುವಜನರು ರೈಲಲ್ಲೇ ಕೆಲಸಕ್ಕೆ ಹೋಗಬಹುದು.

 

ಭಕ್ತ : ಇದು ಉದ್ಧಟತನದ ಮಾತು.

 

ವ್ಯಕ್ತಿ : ದೇಶದ ಎಲ್ಲರಿಗೂ ಭರವಸೆ ಕೊಟ್ಟಂತೆ ನಿಮ್ಮ ವಿಶ್ವಗುರು ಪಕ್ಕಾ ಮನೆ ಕಟ್ಟಿಕೊಟ್ಟು ಮನೆಮನೆಗೆ ನಲ್ಲಿ ಹಾಕಿಸಿ ನೀರು ಬಿಡ್ತಾರೋ ಆಗ ಆರಾಮಾಗಿ ರೈಲಲ್ಲಿ ಪ್ರಯಾಣ ಮಾಡಬೋದು.

 

ಭಕ್ತ : ಇದೆಂತಾ ಅಧಿಕ ಪ್ರಸಂಗತನ. ನಮ್ಮ ದೇವರು ನಿಮಗಾಗಿ ಏನೂ ಮಾಡಿಲ್ಲಾ ಅಂತಾ ಕೇಳೋದೇ ದೇಶದ್ರೋಹ. ನೀನು ದೇಶಕ್ಕೆ ಏನು ಮಾಡಿದ್ದೀಯಾ ಮಾಡ್ತಿದ್ದೀಯಾ ಅನ್ನೋದು ದೇಶಪ್ರೇಮ. ಮೈಂಡ್ ಇಟ್.. ಬಿಟ್ಟಿ ಭಾಗ್ಯದಿಂದ ಬದುಕೋ ಭಿಕ್ಷುಕರು ನೀವು, ನಮ್ಮ ಭಗವಂತನ ಬಗ್ಗೆ ಟೀಕೆ ಮಾಡ್ತೀರಾ? ಹೌ ಡೇರ್ ಆರ್ ಯು.

 

ವ್ಯಕ್ತಿ : ಯೋ.. ಪ್ರತಿಯೊಂದಕ್ಕೂ ನಾನು ನನ್ನಂತವರು ಕಟ್ಟೋ ತೆರಿಗೆಯಿಂದ ಕಣಲೇ ನಮಗೆ ಭಾಗ್ಯಗಳನ್ನ ಕೊಡ್ತಿರೋದು. ಅವು ಭಿಕ್ಷೆಯಲ್ಲಾ ನಮ್ಮ ಹಕ್ಕು ತಿಳ್ಕೋ, ಸಾಧ್ಯವಾದರೆ ಬಿಟ್ಟಿ ಭಾಗ್ಯಗಳಿಂದಾ ದೇಶ ದಿವಾಳಿ ಆಗುತ್ತೆ ಅಂತಾ ಹೇಳಿದ ಬಡವರ ವಿರೋಧಿ ವಿಶ್ವಗುರುವಿಗೂ ತಿಳಿಸು.

 

ಭಕ್ತ : ಇದು ದೇಶದ್ರೋಹ. ನೀನು ಯಾಕೆ ನಗರ ನಕ್ಸಲ್ಲರ ತರಾ ಮಾತಾಡ್ತಿದ್ದೀ

 

ವ್ಯಕ್ತಿ : ನೋಡಯ್ಯಾ ಭಕ್ತಾಸುರಾ. ನಮಗೆ ಬೇಕಾಗಿರೋದು ಕೈಗೆ ಕೆಲಸ, ಬೆಳೆದ ಬೆಳೆಗೆ ತಕ್ಕ ಬೆಲೆ, ಶ್ರಮಕ್ಕೆ ತಕ್ಕ ಕೂಲಿ. ಸಮಾನ ಶಿಕ್ಷಣ, ಎಲ್ಲರಿಗೂ ಉಚಿತ ಆರೋಗ್ಯ ಅಷ್ಟೇ. ನಮಗೆ ಬಿಲ್ಡಪ್ ರೈಲುಗಳೂ ಬೇಕಿಲ್ಲಾ, ಕಂಬಿನೇ ಇಲ್ಲದೇ ರೈಲು ಬಿಡೋ ಬೊಗಳೆ ದಾಸಯ್ಯಗಳೂ ಬೇಕಿಲ್ಲಾ

 

ಭಕ್ತ : ಇದು ನಮ್ಮ ದೇವರಿಗೆ ನೀನು ಮಾಡ್ತಿರೋ ಅಪಮಾನ. ಇದನ್ನ ನಾವು ಸಹಿಸೋದಿಲ್ಲ.

 

ವ್ಯಕ್ತಿ : ಸಹಿಸೋಕಾಗದಿದ್ರೆ ಮೂರು ಮುಚ್ಕೊಂಡು ಹೋಗಿ ಭಜನೆ ಮಾಡು. ವಂದೇ ಭಾರತ್ ರೈಲಂತೆ. ಬುಲೆಟ್ ಟ್ರೇನಂತೆ. ಇವುಗಳಿಂದ ಬಡವರಿಗೆ ಏನಾದ್ರೂ ಉಪಯೋಗ ಇದೆ ಏನಯ್ಯಾ ಬಕೆಟ್ ಭಕ್ತಾ. ಎಕ್ಸಪ್ರೆಸ್ ರಸ್ತೆ ಮಾಡೋದು ದುಬಾರಿ ಟೋಲ್ ವಸೂಲಿ ಮಾಡೋದು. ಹೈಪೈ ಟ್ರೇನ್ ಬಿಡೋದು ದುಬಾರಿ ದರ ಕೀಳೋದು. ಇದೇನಾ ನಿಮ್ಮ ದೊರೆಗಳು ಅಭಿವೃದ್ದಿ ಹೆಸರಲ್ಲಿ ಲೂಟಿ ಮಾಡೋ ಯೋಜನೆಗಳು.

 

ಭಕ್ತ : ಛೇ ಇದೆಂತಾ ಚೀಪ್ ಮೆಂಟಲಿಟಿ ಇದು. ನಮ್ಮ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಿದೆ. ನಮ್ಮ ದೇವರು ಇಡೀ ಜಗತ್ತಿಗೆ ವಿಶ್ವಗುರು ಆಗಿದ್ದಾರೆ. ಅದಕ್ಕಾಗಿ ಎಲ್ಲದರಲ್ಲೂ ಅಂತರಾಷ್ಟ್ರೀಯ ಸ್ಟ್ಯಾಂಡರ್ಡ್ ಮೆಂಟೇನ್ ಮಾಡಬೇಕಾಗುತ್ತೆ. ಆಮೆ ಹಾಗೇ ತೆವಳುವ ಹಳೇ ಡಬ್ಬಾ ರೈಲಿನ ಕಾಲ ಹೋಯ್ತು. ಇನ್ನೇನಿದ್ದರೂ ಹೈಪೈ ಹೈಸ್ಪೀಡ್ ಟ್ರೇನ್ ಯುಗ. ಮೊದಲು ನಿನ್ನಂತೋರು ಅಪ್ಡೇಟ್ ಆಗಬೇಕು ಆಗಲೇ ನಮ್ಮ ದೇಶ ಇಂಟರ್ ನ್ಯಾಶನಲ್ ಆಗೋದು.

 

ವ್ಯಕ್ತಿ : ಯೋ ಏನಯ್ಯಾ ಅಪ್ಡೇಟ್ ಆಗೋದು ನಿನ್ನ ತಲೆ. ಮೊದಲು ಬಡಜನರ ಬದುಕು ಅಪ್ಡೇಟ್ ಮಾಡ್ರಯ್ಯಾ? ದೇಶದ ಸಂಪತ್ತನ್ನು ಆದಾನಿ ಅಂಬಾನಿಯಂತಾ ತಿಮಿಂಗಿಲಗಳ ಗೋದಾಮಲ್ಲಿ ಕೂಡಿ ಹಾಕಿದರೆ ಜನರ ಸಂಪಾದನೆ ಅದೆಂಗೆ ಅಪ್ಡೇಟ್ ಆಗುತ್ತೆ. ಬೀಜ ಗೊಬ್ಬರ ಪೆಟ್ರೋಲ್ ಡೀಸಲ್ ಬೆಲೆ ಏರಿಸಿದ್ರೆ ಹೇಗೆ ರೈತರ ಬದುಕು ಅಪ್ಡೇಟ್ ಆಗುತ್ತೆ. ಗ್ಯಾಸ್ ಸಿಲಿಂಡರ ಬೆಲೆ ಮೂರು ಪಟ್ಟು ಹೆಚ್ಚು ಮಾಡಿದ್ರೆ ಮಹಿಳೆಯರ ಮನೆ ಖರ್ಚು ಅದು ಹೇಗೆ ಅಪ್ಡೇಟ್ ಆಗುತ್ತೆ. ಜನರನ್ನ ಬಡತನಕ್ಕೆ ನೂಕಿ ಹೈಟೆಕ್ ಟ್ರೇನು ಹತ್ತಿ ಅಂದ್ರೆ ಹೇಗಯ್ಯಾ? ಜನರ ಹತ್ರ ಎಲ್ಲಿದೆ ಕಾಸು? ಎಲ್ಲಿದೆ ಸಂಪಾದನೆ? ಎಲ್ಲಿದೆ ಉದ್ಯೋಗ

 

ಭಕ್ತ : ದೇಶಕ್ಕಾಗಿ ಎಲ್ಲಾ ರೀತಿ ತ್ಯಾಗ ಮಾಡಿದಾಗಲೇ ದೇಶ ಮುಂದುವರೆಯುತ್ತದೆ ಗೊತ್ತಾ.

 

ವ್ಯಕ್ತಿ : ಹೌದಯ್ಯಾ ಹೌದು. ನಾವು ನಮ್ಮ ಹೊಟ್ಟೆ ಬಟ್ಟೆ ಬಿಟ್ಟು, ಮಕ್ಕಳ ಶಿಕ್ಷಣ, ಮನೆ ಮಕ್ಕಳ ಭವಿಷ್ಯ ಅಷ್ಟೇ ಯಾಕೆ ಬದುಕನ್ನೇ ದೇಶಕ್ಕಾಗಿ ತ್ಯಾಗ ಮಾಡ್ತೇವೆ, ಅಲ್ಲಿ ನಿಮ್ಮ ದೇವರು ಕಾರ್ಪೋರೇಟ್ ಕಂಪನಿಗಳಿಗೆ ಕೇಳಿದ್ ವರ ಕೊಟ್ಟು ದೇಶವನ್ನ ದಿವಾಳಿ ಮಾಡ್ತಾ ಹೋಗಲಿ

 

ಭಕ್ತ : ಬೆಲೆ ಎಷ್ಟೇ ಏರಲಿ, ಏನೇ ಕಷ್ಟ ಬರಲಿ, ನಮ್ಮ ದೇವರಿಗಾಗಿ ನಾವು ಏನ್ ಬೇಕಾದರೂ ಎದುರಿಸೋಕೆ ಸಿದ್ದರಾಗಿದ್ದೇವೆ. ಯಾಕಂದ್ರೆ ನಮಗೆ ದೇಶಮುಖ್ಯ, ವಿಶ್ವಗುರುಗಳು ಹೇಳಿದ್ದೆ ನಮಗೆ ವೇದವಾಕ್ಯ.

 

ವ್ಯಕ್ತಿ : ತೊ ಥೋ.. ನಿಮ್ಮ ಗುಲಾಮಗಿರಿ ನಿನ್ನತ್ರಾ ಇಟ್ಕೊಳ್ಳಯ್ಯಾ. ದೇಶ ಅಂದ್ರೆ ಹೈಟೆಕ್ ಟ್ರೇನ್ ಎರೋಪ್ಲೇನ್ ಅಲ್ಲಯ್ಯಾ, ದೇಶ ಅಂದ್ರೆ ಐಶಾರಾಮಿ ಹೋಟೆಲು, ಅತೀ ದೊಡ್ಡ ಪ್ರತಿಮೆ, ಹೊಸ ಸಂಸತ್ ಭವನಗಳು ಅಲ್ರಯ್ಯಾ. ದೇಶ ಅಂದ್ರೆ ಅಲ್ಲಿ ವಾಸ ಮಾಡೋ ಜನಗಳು. ದೇಶ ಸಮೃದ್ದ ಆಗಬೇಕಂದ್ರೆ ಜನರಿಗೆ ಸಂಪನ್ಮೂಲಗಳ ಸಮಾನ ಹಂಚಿಕೆ ಆಗಬೇಕು. ಜನರು ನೆಮ್ಮದಿಯಾಗಿದ್ರೆ ದೇಶ ನೆಮ್ಮದಿಯಾಗಿರುತ್ತೆ. ಜನರೇ ಸಂಕಷ್ಟದಲ್ಲಿದ್ದರೆ ದೇಶದಲ್ಲಿ ದಂಗೆ ಏಳುತ್ತೆ, ಅರಾಜಕತೆ ಹೆಚ್ಚಾಗುತ್ತೆ.

 

ಭಕ್ತ : ನೋಡ್ರಪ್ಪಾ ನೋಡಿ. ಇವನೊಬ್ಬ ಭಯೋತ್ಪಾದಕ ದಂಗೆ ಮಾಡ್ತಾನಂತೆ. ಇವನೊಬ್ಬ ದೇಶದ್ರೋಹಿ ಅರಾಜಕತೆ ಸೃಷ್ಟಿ ಮಾಡ್ತಾನಂತೆ. ನಕ್ಸಲ್ ಈತ. ಇಂತವರನ್ನ ಸುಮ್ಮನೇ ಬಿಡಬಾರದು. ಏನು ನೋಡ್ತಾ ನಿಂತಿದ್ದೀರಿ? ಹಿಡೀರಿ ಹೊಡೀರಿ ಕೊಂದಾಕಿ ದೇಶದ್ರೋಹಿಯನ್ನ.

 

ಇನ್ನೊಬ್ಬ : ಆಗಿನಿಂದ ಎಲ್ಲಾ ಮಾತು ಕೇಳಿಸ್ಕೊಂಡ್ವಿ. ಅವನೇನಯ್ಯಾ ತಪ್ಪು ಹೇಳಿದ್ದಾನೆ

 

ಮತ್ತೊಬ್ಬ : ಊಟಕ್ಕಿಲ್ಲದ ಉಪ್ಪಿನಕಾಯಿ ಡ್ಯಾಶ್ ಡ್ಯಾಶ್ ಗೆ ಯಾಕಂತೆ. ಜನರಿಗೆ ಊಟ ಇಲ್ಲಾ, ಉದ್ಯೋಗ ಇಲ್ಲಾ, ದ್ವೇಷ ಹುಟ್ಟಿಸೋ ಜನರಿಂದಾ ನೆಮ್ಮದಿ ಇಲ್ಲಾ. ಐಶಾರಾಮಿ ಟ್ರೇನ್ ಬಿಡ್ತಾರಂತೆ. ಇಕ್ರೋ ಇವನ ಮೂತಿಗೆ.

 

ಮಹಿಳೆ : ಇಂತಾ ಗುಲಾಮರಿಂದಲೇ ದೇಶ ಸರ್ವಾಧಿಕಾರಿ ಕೈಗೆ ಹೋಗಿದ್ದು. ಮೊದಲು ಇಂತವರಿಗೆ ಬಹಿಷ್ಕಾರ ಹಾಕಿ ಓಡಿಸಿ.

 

ಭಕ್ತ : ಹೀಗೆಲ್ಲಾ ಹೊಡಿಯೋದು ದೇಶದ್ರೋಹ. ಹಲ್ಲೆ ಮಾಡೋದು ಧರ್ಮದ್ರೋಹ. ನಮ್ಮ ದೇವರ ಭಕ್ತರು ನಿಮ್ಮನ್ನ ಸುಮ್ಕೆ ಬಿಡೋದಿಲ್ಲ. ಸೇಡು ತೀರಿಸ್ಕೊಂತಾರೆ.

 

ಎಲ್ಲರೂ : ಹಿಡ್ಕೊಳ್ರೋ. ಹೊಡೀರಿ. ಕಂತ್ರಿ ಗುಲಾಮ ನಾಯಿನ ಓಡಿಸ್ರಿ. ( ಎಲ್ಲರೂ ಹೊಡೆದು, ಅಂಗಿ ಹರಿದು, ಥೂ ಅಂತಾ ಉಗಿದು ಓಡಿಸ್ತಾರೆ.

 

ಭಕ್ತ : ( ನರಳುತ್ತಾ ಕುಂಟುತ್ತಾ) ಒಂದೇ ಭಾರತ್, ಒಂದೇ ಮಾತರಂ, ಒಂದೇ ದೇವರು, ಒಂದೇ ಧರ್ಮ ( ಎನ್ನುತ್ತಾ ನಡೆಯಲಾಗದೇ ಕುಸಿದು ಬೀಳುತ್ತಾನೆ

 

ಹಿನ್ನೆಲೆಯಲ್ಲಿ ಹಾಡು..

 

ದೇಶವೆಂದರೆ ಕಲ್ಲು ಮಣ್ಣು ಇಮಾರತು ಪ್ರತಿಮೆಗಳಲ್ಲ

ಅಲ್ಲಾ ಅಲ್ಲಾ ಅಲ್ಲವೇ ಅಲ್ಲಾ..

ಬಾಳಿ ಬದುಕುವ ಜನರು.. ಆಹಾ ಜನರು

 

ದೇಶವೆಂದರೆ ವಿಮಾನ ಬಸ್ಸು ಬುಲೆಟ್ ಟ್ರೇನುಗಳಲ್ಲ 

ಅಲ್ಲಾ ಅಲ್ಲಾ ಅಲ್ಲವೇ ಅಲ್ಲಾ..

ಸರ್ವ ಜನಾಂಗದ ಶಾಂತಿಯ ತೋಟ

ತೋಟ ತೋಟ ಹೂದೋಟ

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ