ಸನಾತನದೊಳಗೇನಿದೆ? (ಪ್ರಹಸನ – 60)
(ಪ್ರಹಸನ – 60)
ಸನಾತನದೊಳಗೇನಿದೆ?
************************
ಹೆಂಡತಿ : ರೀ ಈ ಸನಾತನ ಧರ್ಮ ಅಂದ್ರೆ ಏನದು? ಟಿವಿ ಹಾಕಿದ್ರೆ ಸಾಕು ಬಾಯಿಬಡ್ಕೊತಿದ್ದಾರಲ್ಲಾ.
ಗಂಡ : ಪುರಾತನ ಕಾಲದಲ್ಲಿದ್ದದ್ದೇ ಸನಾತನ
ಹೆಂಡತಿ : ಹೋ.. ಯಾವುದೋ ಕಾಲದಲ್ಲಿ ಇದ್ದ ಧರ್ಮ ಈಗಲೂ ಇರಬೇಕಾ? ಕಾಲ ಬದಲಾದಂಗೆ ಎಲ್ಲವೂ ಬದಲಾಬೇಕಲ್ವೇನ್ರೀ..
ಗಂಡ : ಹೌದು ಕಣೆ.. ಬದಲಾವಣೆ ಜಗದ ನಿಯಮ. ಆದರೆ ಈ ಜಾತಿ ಧರ್ಮ ಅಂತಾ ಏನಿದೆಯಲ್ಲಾ ಇದು ಮಾತ್ರ ಬದಲಾಗೋದಿಲ್ಲ ನೋಡು.
ಹೆಂಡತಿ : ಸನಾತನ ಧರ್ಮ ಅಂದ್ರೆ ಡೆಂಗ್ಯೂ ಕೋವಿಡ್ ತರ ರೋಗ ಅಂತೆ ಹೌದೇನ್ರೀ.
ಗಂಡ : ಅದಕ್ಕಿಂತಾ ಭಯಂಕರ ಕಣೆ. ಈ ರೋಗಗಳಿಗೆ ಚಿಕೆತ್ಸೆನಾದರೂ ಇದೆ. ಆದರೆ ಈ ಧರ್ಮದ ಹುಚ್ಚು ಹೆಚ್ಚಾದವರಿಗೆ ಚಿಕೆತ್ಸೆನೂ ಇಲ್ಲಾ. ಧರ್ಮದ ವಿರುದ್ದ ಯಾರೇ ಮಾತಾಡಿದ್ರೂ ಕಚ್ಚಲು ಬರ್ತಾರೆ.
ಹೆಂಡತಿ : ಅಂದ್ರೆ ರೇಬಿಸ್ ರೋಗ ಅಂತೀರಾ? ಹಚ್ಚಿಸಿಕೊಂಡವರಿಗೆಲ್ಲಾ ಹುಚ್ಚರಾಗಿ ಸಾಯ್ರಾರಾ?
ಗಂಡ : ರೇಬಿಸ್ ಗೂ ಚುಚ್ಚುಮದ್ದಿದೆ ಆದರೆ ಧರ್ಮಾಂಧತೆಗೆ ಇಲ್ಲಾ ಕಣೆ. ಉದಾಹರಣೆಗೆ ಸನಾತನ ಧರ್ಮ ನಿರ್ಣಾಮ ಆಗಬೇಕು ಅಂತಾ ಉದಯಗಿರಿನೋ ಇನ್ಯಾರೋ ಹೇಳಿದ್ರು ಅನ್ಕೋ. ಈ ಧರ್ಮಾಂಧರಿಗೆ ಹುಚ್ಚು ಕೆರಳಿ ಮೈಯೆಲ್ಲಾ ಪರಚಿಕೊಳ್ಳುತ್ತಾರೆ. ಸನಾತನದ ವಿರುದ್ದ ಮಾತಾಡಿದವರ ತಲೆ ಕಡೆದವರಿಗೆ ಹತ್ತು ಕೋಟಿ ಬಹುಮಾನ ಘೋಷಣೆ ಮಾಡ್ತಾರೆ. ಸನಾತನಿಗಳು ಒಂದಾಗಿ ವಿರೋಧಿಸಿದವರನ್ನು ನಿಂದಿಸಲು ಆರಂಭಿಸುತ್ತಾರೆ.
ಹೆಂಡತಿ : ಹಂಗಾದ್ರೆ ಇದು ಭಾರೀ ರೋಗಗ್ರಸ್ತ ಧರ್ಮವೇ ಇರಬೇಕು ಅಲ್ವೇನ್ರೀ. ಅಷ್ಟಕ್ಕೂ ಸನಾತನದಲ್ಲಿ ಏನಿದೆ ಅದನ್ನಾದ್ರೂ ಹೇಳ್ರಿ.
ಗಂಡ : ಏನೂಂತಾ ಹೇಳ್ಲೇ. ಬ್ರಾಹ್ಮಣರು ಶ್ರೇಷ್ಟ, ಶೂದ್ರರು ಕನಿಷ್ಟ, ದಲಿತರು ಗುಲಾಮರು ಅಂತಾ ಇದೆ. ಅಸಮಾನತೆ ತಾರತಮ್ಯವೇ ತುಂಬಿದೆ. ಶೂದ್ರರು ದಲಿತರು ಹಾಗೂ ಹೆಂಗಸರು ವಿದ್ಯೆ ಕಲಿಯಬಾರದು ಅಂತೆಲ್ಲಾ ಸಮಾತನ ಧರ್ಮದಲ್ಲಿದೆ ಕಣೆ.
ಹೆಂಡತಿ : ಅಯ್ಯೊ ಅಯ್ಯೋ.. ನಾವು ಹೆಂಗಸರು ಕಲೀಬಾರ್ದಾ. ಯಾಕೆ ಸಾಯೋವರೆಗೂ ಮನೆಯವರ ಚಾಕರಿ ಮಾಡಕೊಂಡೆ ಇರಬೇಕಾ? ಇದೆಂತಾ ಧರ್ಮಾರ್ರೀ.. ಇದನ್ನ ನಾನು ಖಂಡಿಸ್ತೇನೆ.
ಗಂಡ : ಶ್ ಸುಮ್ಮಕಿರೇ. ಸನಾತನಿಗಳಿಗೆ ಗೊತ್ತಾದ್ರೆ ತಲೆಗೂ ಬೆಲೆ ಕಟ್ಟಬಹುದು. ಧರ್ಮದ್ರೋಹಿಗಳು ಅಂತಾ ಆರೋಪಿಸಿ ನಮ್ಮನೇನೇ ಸುಟ್ಟಕಬಹುದು.
Comments
Post a Comment