Posts

ಶ್!!! ಮಾಡಿದೋರ ಪಾಪ ನೋಡಿದೋರಿಗೆ

Image
ಪ್ರಹಸನ - 82 ಶ್!!! ಮಾಡಿದೋರ ಪಾಪ ನೋಡಿದೋರಿಗೆ (ಕೋರ್ಟ್ ಹಾಲ್.. ಪೆನ್ ಡ್ರೈವ್ ಕೇಸ್ ಕುರಿತು ವಿಚಾರಣೆ ನಡೀತಾ ಇದೆ) ವಕೀಲ : ಸ್ವಾಮಿ ಕಟಕಟೆಯಲ್ಲಿ ನಿಂತಿರುವ ಈ ಆರೋಪಿ ಅತೀ ದೊಡ್ಡ ಅಪರಾಧ, ಘನಘೋರ ಅಪರಾಧ ಮಾಡಿದ್ದಾನೆ.. ಹೀಗಾಗಿ ಈತನಿಗೆ ಕಠಿನಾತಿಕಠಿನ ಶಿಕ್ಷೆ ಕೊಡಲೇಬೇಕೆಂದು ಕೇಳಿಕೊಳ್ಳುವೆ. ನ್ಯಾಯಾಧೀಶ : ಅಪರಾಧವಾ? ಅದೂ ಘನಘೋರವಾದದ್ದಾ, ಏನು ಹೇಳಿ? ವಕೀಲ : ಈತ ನೋಡಬಾರದ್ದನ್ನು ನೋಡಿದ್ದಾನೆ ಸ್ವಾಮಿ. ಬೇರೆಯವರು ಖಾಸಗಿಯಾಗಿ ಮಾಡಿಕೊಂಡಿದ್ದ ರತಿ ಕ್ರೀಡಾ ವಿನೋದದ ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ನೋಡಿ ತಪ್ಪು ಮಾಡಿದ್ದಾನೆ. ನ್ಯಾಯಾಧೀಶ : ಅಂದರೆ  ಈತ ನೋಡಿದವ. ಹಾಗಾದರೆ ವಿಡಿಯೋ ಮಾಡಿದವರು ಯಾರು? ವಕೀಲ : ಮಾಡಿದವರಿಗೆ ಶಿಕ್ಷೆ ಆಗಬಹುದು ಬಿಡಬಹುದು ಅದು ಬೇರೆ ವಿಷಯ ಸ್ವಾಮಿ.. ಆದರೆ ಈತ ಅದನ್ನೆಲ್ಲಾ ನೋಡಬಾರದಿತ್ತು ನೋಡಿದ್ದಾನೆ. ನ್ಯಾಯಾಧೀಶ : ಆಯ್ತು ನೋಡಿದ್ದಾಯ್ತು. ನೋಡಬಾರದ್ದಂತಾ ವೀಡಿಯೋ ಮಾಡಿದ್ದು ಯಾರು? ವಕೀಲ : ಅದೇ ಸ್ವಾಮಿ.. ಯಾರು ಆ ರೀತಿ ಕೆಲಸ ಮಾಡಿದ್ದಾರೋ ಅವರೇ ರೀತಿ  ವಿಡಿಯೋ ಕೂಡಾ ಮಾಡಿದ್ದಾರೆ?  ನ್ಯಾಯಾಧೀಶ : ಮಾಡಿದ ಮೇಲೆ ಅದನ್ನೇ ಮತ್ತೆ ಮತ್ತೆ ನೋಡೋ ಚಪಲ ಅದೆಂತದ್ದು. ಹೋಗಲಿ ಎಷ್ಟು ವೀಡಿಯೋ ಇವೆ. ವಕೀಲ : ನೂರಾರು ಹೆಣ್ಮಕ್ಕಳ ಜೊತೆ ಮಾಡಿದ ಮೂರು ಸಾವಿರದಷ್ಟು ವಿಡಿಯೋಗಳು ಇರಬೋದು ಸ್ವಾಮಿ.  ನ್ಯಾಯಾಧೀಶ : ಏನು ಒಬ್ಬನೇ ಇಷ್ಟೊಂದು ಹೆಂಗಸರ ಜೊತೆಗಾ? ಅದೆಂಗೆ ಸಾಧ್ಯ?  ( ಆರೋ

ಚೊಂಬೋ ಚೊಂಬು....‌

Image
ಪ್ರಹಸನ - 81  ಚೊಂಬೋ ಚೊಂಬು... ಟಿವಿಯಲ್ಲಿ  ಹಾಡು : ಚೊಂಬೋ ಚೊಂಬು ಕೊಟ್ಟ ಭರವಸೆಯಲ್ಲಾ ಚೊಂಬು ಇಟ್ಟ ವಿಶ್ವಾಸಕ್ಕೆ ಚೊಂಬು 15 ಲಕ್ಷಕ್ಕೆ ಮೂರು ನಾಮ ಚೊಂಬು ವರ್ಷಕ್ಕೆ 2 ಕೋಟಿ ಉದ್ಯೋಗ ಚೊಂಬು ರೈತರ ಆದಾಯ ದ್ವಿಗುಣವೆಂಬುದೂ ಚೊಂಬು ಚೊಂಬೋ ಚೊಂಬು ಕೊಟ್ಟ ಭರವಸೆಯಲ್ಲಾ ಚೊಂಬು ಇಟ್ಟ ವಿಶ್ವಾಸಕ್ಕೆ ದೊಡ್ಡ ಚೊಂಬು ಕಮಲಪತಿ : ಲೇ ಇವಳೇ ಮೊದಲು ಆ ಟಿವಿ ಬಂದ್ ಮಾಡಲು ನಿನ್ನ ಕುಲಪುತ್ರನಿಗೆ ಹೇಳು.. ಚೊಂಬಿನ ಸುದ್ದಿ ಕೇಳಿ ಕೇಳಿ ಸಾಕಾಗಿದೆ.. ಹೆಂಡತಿ : ಏನೋ ಹುಡುಗ ನೋಡ್ಕೊಳ್ಳಲಿ ಬಿಡ್ರಿ. ಟಿವಿಯಲ್ಲಿ ಇದ್ದಿದ್ದು ಇದ್ದಂಗೆ ಹೇಳ್ತಿದ್ದಾರೆ ಅಲ್ವಾ. ಕಮಲಪತಿ : ಏನೇ.. ನೀನೂ ವಿರೋಧ ಪಕ್ಷ ಸೇರಿಕೊಂಡ್ಯಾ.. ಮೊದ್ಲು ನಂಗೆ ಕುಡಿಯೋಕೆ ನೀರು ಕೊಡು. ಹೆಂಡತಿ : ( ಚೊಂಬಲ್ಲಿ ನೀರು ತಂದು ಕೊಡುತ್ತಾಳೆ)  ಕಮಲಪತಿ : ಏನೇ ಏನೇ ಇದು.. ಹೆಂಡತಿ : ಕಣ್ಣಿಗೆ ಕಾಣೋದಿಲ್ವಾ. ಇದು ಚೊಂಬು, ಅದರೊಳಗಿರೋದು ನೀರು. ಕಮಲಪತಿ : ಈಗಾಗಲೇ ವಿರೋಧಿಗಳು ಕೂತಲ್ಲಿ ನಿಂತಲ್ಲಿ ಬಲವಂತಾ ಮಾಡಿ ಚೊಂಬಲ್ಲಿ ನೀರು ಕುಡಿಸ್ತಾವ್ರೆ. ನೀನೂ ಅದನ್ನೇ ಮಾಡ್ತಿಯೇನೇ. ಬೇರೆ ಯಾವುದೂ ಸಿಗಲಿಲ್ವಾ ನೀರು ತರೋಕೆ. ( ಎಂದು  ಚೊಂಬು ಬಿಸಾಕುತ್ತಾನೆ. ಮಗ ಅದನ್ನು ಎತ್ತಿಕೊಳ್ತಾನೆ) ಹೆಂಡತಿ : ಅಯ್ಯಾ.. ದಿನಾಲೂ ಈ ಚೊಂಬಲ್ಲೆ ಅಲ್ವಾ ನೀವು ನೀರು ಕುಡಿಯೋದು. ಚೊಂಬು ಯಾವುದಾದರೇನು ಕುಡಿಯೋಕೆ ನೀರು ಮುಖ್ಯ ಅಲ್ವಾ..  ಕಮಲಪತಿ : ಇನ್ಮೇಲೆ ನಾನು ಚೊಂಬಲ್ಲಿ ನೀರು ಕುಡಿಯ

ಮೆದುಳಿಲ್ಲದ ಕತ್ತೆ ಪ್ರಸಂಗ

Image
ಪ್ರಹಸನ - 79 ಮೆದುಳಿಲ್ಲದ ಕತ್ತೆ ಪ್ರಸಂಗ (ಯಥಾಪ್ರಕಾರ ಅಮವಾಸ್ಯೆಯಂದು ರಾಜಾ ವಿಕ್ರಮಾದಿತ್ಯನು ಸ್ಮಶಾನಕ್ಕೆ ಬಂದು ಹುಣಸೆಮರದ ಕೊಂಬೆಗೆ ನೇತಾಡುತ್ತಿದ್ದ ಬೇತಾಳನನ್ನು ಇಳಿಸಿ ತನ್ನ ಬೆನ್ನ ಮೇಲೆ ಹೊತ್ತು ಮೌನವಾಗಿ ಸಾಗುತ್ತಾನೆ. ಆಗ ಬೇತಾಳವು ರಾಜನನ್ನು ಉದ್ದೇಶಿಸಿ) ಬೇತಾಳ : ರಾಜಾ ಈಗ ಬಂತು ನೋಡು ಮಜಾ. ಈ ಬೇತಾಳನ ಹೊತ್ತೊಯ್ದು ಬೈರಾಗಿಗೆ ಒಪ್ಪಿಸಲು ಮತ್ತೆ ಬಂದೆಯಾ? ಇರಲಿ ಬೈರಾಗಿಯ ಬಳಿ ಹೋಗಿ ತಲುಪುವ ಮುನ್ನ ನಿನ್ನ ಹಾದಿಯ ಬೇಸರವನ್ನು ಕಳೆಯಲು ಕಥೆಯೊಂದನ್ನು ಹೇಳುವೆ ಕೇಳುವಂತವನಾಗು.. ರಾಜಾ ಅದೊಂದು ಕಾಡು. ಆ ಕಾಡಿಗೆ ಬಲಿಷ್ಟನಾದ ಸಿಂಹನೇ ರಾಜ. ರಾಜನಾದ ಮೇಲೆ ಆ ಸಿಂಹ ಬೇಟೆಯಾಡುವುದನ್ನೇ ಮರೆತಿತ್ತು. ಮಂತ್ರಿಯಾಗಿ ಸದಾ ಜೊತೆಗಿರುತ್ತಿದ್ದ ನರಿಯೊಂದು ನಿತ್ಯ ರಾಜನ ಆಹಾರಕ್ಕೆ ವ್ಯವಸ್ಥೆ ಮಾಡುತ್ತಿತ್ತು. ಏನು ಮಾಡುತ್ತಿತ್ತು? ವಿಕ್ರಮ : (ಮೌನವಾಗಿದ್ದ) ಬೇತಾಳ : ಸರಿ ಮುಂದೆ ಕೇಳುವಂತವನಾಗು. ಒಮ್ಮೆ ಕಾಡಿನ ರಾಜನಿಗೆ ಜೋರಾಗಿ ಹಸಿವೆಯಾಯ್ತು. "ನನಗೆ ಹಸಿವಾಗಿದೆ. ಏನಾದರೂ ತಿನ್ನಲು ತಂದು ಕೊಡು" ಎಂದು ಮಂತ್ರಿ ನರಿಗೆ ಆಜ್ಞಾಪಿಸಿತು. ಆ ಕುತಂತ್ರಿ ನರಿ ಒಂದು ಕತ್ತೆಯ ಬಳಿ ಹೋಗಿ ಹೇಳಿತು:  "ಸಿಂಹ ರಾಜನಿಗೆ ವಯಸ್ಸಾಗಿದೆ. ನಿನ್ನಂತಹ ನಿಷ್ಠಾವಂತನಿಗೆ ಪಟ್ಟ ಕಟ್ಟುತ್ತಾರಂತೆ.  ನೀನೇ ಈ ಕಾಡಿನ ರಾಜನಾಗುವಂತೆ ಬಾ ನನ್ನ ಜೊತೆ." ಎಂದು ಹೇಳಿದಾಗ ಕತ್ತೆ ಸಂತಸದಿಂದ ಒಪ್ಪಿ ಕಿರು

ಶುದ್ಧೀಕರಣ ಯಂತ್ರ

Image
ಪ್ರಹಸನ - 78 ಶುದ್ಧೀಕರಣ ಯಂತ್ರ.... ( ಮಹಿಳೆಯೊಬ್ಬಳು ಹೂ ಪಕ್ಷದ ಕಚೇರಿಗೆ ಬಂದು) ಮಹಿಳೆ : ಇದು ಹೂ ಪಕ್ಷದ ಕಚೇರಿನಾ ಸಾರ್.. ಲೀಡರ್ : ಹೌದಮ್ಮಾ.. ಕಾಣಸ್ತಾ ಇಲ್ವಾ  ಎಲ್ಲಾ ಕಡೆ ಹೂ ಚಿತ್ರ ಅಂಟಿಸಿರೋದು. ( ಕತ್ತು ಅತ್ತ ಇತ್ತ ತಿರುಗಿಸಿ ಉದ್ದ ಮಾಡಿ ಏನೋ ಹುಡುಕುತ್ತಾಳೆ) ಲೀಡರ್ : ಏನಮ್ಮಾ ಹುಡುಕ್ತಾ ಇದ್ದೀಯಾ? ಯಾರು ನೀನು? ನಿನಗೇನು ಬೇಕು? ಮಹಿಳೆ : ನಾನೂ ಅದನ್ನೇ ಹುಡುಕ್ತಾ ಇದ್ದೀನೀ ಸರ್. ಎಲ್ಲಿಟ್ಟಿದ್ದೀರಿ?  ಲೀಡರ್ : ಅದು ಅಂದ್ರೆ ಏನಮ್ಮಾ? ಇಲ್ಲಿ ಅದು ಇದೂ ಎಂತಾದ್ದೂ ಇಲ್ಲಾ ಹೋಗಮ್ಮೋ. ಮಹಿಳೆ : ಹಂಗೇಳಿದ್ರೆ ಹೆಂಗೆ. ಅದು ನಿಮ್ಮ ಆಫೀಸ್ನಾಗೇ ಐತಂತೆ.. ಎಲ್ರೂ ಹೇಳ್ತಾ ಇದ್ದಾರೆ.. ಎಲ್ಲಿದೆ ಸಾರ್.. ಲೀಡರ್ : ತೋ ಥೋ.. ಅದು ಏನು ಅಂತಾ ಹೇಳಿದ್ರೆ ಇದೆಯೋ ಇಲ್ವೋ ಅಂತಾ ಹೇಳ್ತಿದ್ದೆ.. ಅದೇನಂತಾದ್ರೂ ಹೇಳಮ್ಮೋ. ಮಹಿಳೆ : ಅದೇ ದೊಡ್ಡ ಡಬ್ಬದ ಹಾಗಿರ್ತದೆ. ಈ ಕಡೆ ಕೊಳೆ ಕೊಚ್ಚೆ ಹಾಕಿದ್ರೆ ಆ ಕಡೆ ಸ್ವಚ್ಚವಾಗಿ ಬರುತ್ತಲ್ಲಾ ಸಾರ್.. ಅದು ಎಲ್ಲಿ ಐತೆ ಅಂತಾ? ಲೀಡರ್ : ಏನಮ್ಮಾ ಇದೇನು ಕಸ ಬೇರೆ ಮಾಡೋ ಮುನ್ಸಿಪಾರ್ಟಿ ಗಾರ್ಬೇಜ್ ಯುನಿಟ್ ಅಂದ್ಕೊಂಡಿದ್ದೀಯಾ? ಇದು ಹೂ ಪಕ್ಷದ ಕಚೇರಿ..  ಮಹಿಳೆ : ಹೂ ಪಕ್ಷದ ಕಚೇರಿ ಆದ್ರೆ ಹೂವಿನ ವಾಸನೆ ಬರಬೇಕಿತ್ತಲ್ವಾ ಸಾರ್.. ಆದರೆ ಬೇರೆ ಏನೋ ವಾಸನೆ ಬರ್ತಿದೆ. ಹಾಂ ಇದು ಅದರದ್ದೇ ವಾಸನೆ. ಎಲ್ಲಿದೆ ಹೇಳಿ ಸರ್.. ಲೀಡರ್ : ಅಯ್ಯೋ.. ಏನಂತಾ ಹೇಳಲಿ. ಅದೇನಂತಾ ಹೆಸರಾದ್ರೂ

ಗೆಲುವಿನ ಸೂತ್ರದಲಿ ವಂಚನೆಯ ಪಾತ್ರ

Image
ಪ್ರಹಸನ - 77 ಗೆಲುವಿನ ಸೂತ್ರದಲಿ ವಂಚನೆಯ ಪಾತ್ರ ------------------------------------------------- (ಐದು ವರ್ಷಕ್ಕೊಮ್ಮೆ ನಡೆಯುವ ಜಗತ್ಪಸಿದ್ದ ದೇಸಿ ಕ್ರಿಕೆಟ್ ಪಂದ್ಯಾವಳಿಗೆ ದಿನಾಂಕ ಗೊತ್ತುಪಡಿಸಲಾಯ್ತು. ಮ್ಯಾಚ್ ಗೆಲ್ಲುವ ತಂತ್ರಗಾರಿಕೆಯ ಪೂರ್ವಭಾವಿ ಸಭೆಯನ್ನು ಹಾಲಿ ಚಾಂಪಿಯನ್  ತಂಡದ ಕ್ಯಾಪ್ಟನ್) ಕ್ಯಾಪ್ಟನ್ : ಎಲ್ಲಾ ನಾವು ಅಂದುಕೊಂಡಂಗೆ ಆಯ್ತಲ್ವಾ. ಪಂದ್ಯಾವಳಿ ಆರಂಭಕ್ಕೆ ಮುಂಚೆನೇ ನಮ್ಮ ಪರವಾಗಿರುವ ಮೂವರು ಅಂಪೈರಗಳನ್ನು ನೇಮಕ ಮಾಡಿದ್ದಾಯ್ತಲ್ಲಾ.  ಮ್ಯಾನೇಜರ್ : ಹೌದು ಕ್ಯಾಪ್ಟನ್. ಪಂದ್ಯ ಶುರುವಾಗುವ ಮೊದಲೇ ನಾವು ಅರ್ಧ ಗೆದ್ದಂತೆ. ವಿರೋಧಿ ಪಡೆ ಎಷ್ಟಾದರೂ ಆಟ ಆಡಲಿ. ಡಿಸಿಜನ್ ಮೇಕರ್ ನಮ್ಮ ಅಂಪೈರಗಳೇ ಆಗಿರ್ತಾರೆ.  ಕ್ಯಾಪ್ಟನ್ : ನೋ.. ಅದನ್ನು ಮಾತ್ರ ನಂಬುವ ಹಾಗಿಲ್ಲ. ಥರ್ಡ್ ಅಂಪೈರ್ ಆಗಿ ಟಿವಿ ಮಾಧ್ಯಮಗಳು ಇದ್ದಾವಲ್ಲಾ..  ಮ್ಯಾನೇಜರ್ : ಅದರ ಬಗ್ಗೆ ಚಿಂತೆನೇ ಬೇಡ ಕ್ಯಾಪ್ಟನ್. ಎಲ್ಲಾ ಮಾಧ್ಯಮಗಳೂ ನಮ್ಮ ಕಾರ್ಪೋರೇಟ್ ಪಾರ್ಟನರ್ ಓನರ್ ಶಿಪ್ ನಲ್ಲಿವೆ. ನಾವು ಏನು ತೋರಿಸು ಅಂತೀವೋ ಅಷ್ಟನ್ನೇ ತೋರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ.. ಕ್ಯಾಪ್ಟನ್ : ಆದರೆ ಏನು ? ಮ್ಯಾನೇಜರ್ : ಈ ಸೋಷಿಯಲ್ ಮೀಡಿಯಾಗಳದ್ದೇ ಪ್ರಾಬ್ಲಂ. ಇದ್ದದ್ದನ್ನ ಇದ್ದಂಗೆ ಪ್ರಸಾರ ಮಾಡ್ತಾವೆ. ಕ್ಯಾಪ್ಟನ್ : ಮಾಡಲಿ ಬಿಡಿ. ನಮ್ಮ ಟೀಂ ಅಭಿಮಾನಿಗಳನ್ನ ಪ್ರಚೋದಿಸಿ. ನಮ್ಮ ಐಟಿ ಸೆಲ್ ನವರನ್ನು ಎಚ್ಚರಿಸಿ. ನಿರಂತ

ಸಿಂಹಗಳ ಪಜೀತಿ ( ಪ್ರಹಸನ)

Image
ಪ್ರಹಸನ - 76 ಸಿಂಹಗಳ ಪಜೀತಿ (ಝೂನಲ್ಲಿ ಒಂದು  ಗಂಡು ಸಿಂಹವನ್ನು ಇನ್ನೊಂದರಲ್ಲಿ ಹೆಣ್ಣು ಸಿಂಹವನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ. ಕೋಣೆಯ ಹೊರಗೆ ನರಿಯೊಂದು ಬಂದು ನಿಂತು) ನರಿ : ಏನು ಕಾಡಿನ ರಾಜರು ಹೇಗಿದ್ದೀರಿ? ಸಿಂಹ : ( ಕೆಕ್ಕರಿಸಿ ನೋಡುತ್ತಾ) ಕಾಡಲ್ಲಿ ರಾಜನಾಗಿದ್ದೆ. ಈಗ ಈ ಕೋಣೆಯಲ್ಲಿ ಬಂಧಿಯಾಗಿರುವೆ. ಕಾಣ್ತಾ ಇಲ್ವಾ. ನರಿ : ಹೋಗಲಿ ನಮ್ಮ ಸಿಂಹಿನಿಯವರು ಹೇಗಿದ್ದಾರೆ?  ಸಿಂಹಿನಿ : (ಗುರಾಯಿಸುತ್ತಾ) ಏಯ್ ಅನಿಷ್ಟವೇ. ನಾವಿಬ್ಬರೂ ಬಂಧನದಲ್ಲಿದ್ದರು ಒಂದೇ ಕೋಣೆಯಲ್ಲಿ ಆನಂದಬಾಗಿದ್ದೆವು. ನಮ್ಮನ್ಯಾಕೆ ಬೇರೆ ಬೇರೆ ಮಾಡಿದ್ದಾರೆ ಅದನ್ನು ಬೊಗಳು ಮೊದಲು. ನರಿ : ಅಯ್ಯೋ ಅದೇನು ಅಂತಾ ಹೇಳಲಿ. ಎಲ್ಲಾ ಹೆಸರಿನ ಮಹಿಮೆ. ಈಗ ನಿಮ್ಮ ಹೆಸರು ಏನು ಹೇಳಿ ರಾಜರೇ? ಸಿಂಹ : ನಾನು ಕಾಡಿನ ರಾಜನಾಗಿದ್ದ ಸಿಂಹ. ನರಿ : (ಪಕಪಕನೇ ನಕ್ಕು) ನೋ.. ನಿಮ್ಮ ಹೆಸರು ಸಿಂಹ ಅಲ್ಲಾ. ಅಕ್ಬರ್.. ಅಂತಾ.  ಸಿಂಹ : ಯಾರಯ್ಯಾ ಅದು ನನ್ನ ಕೇಳದೇ ನನ್ನ ಹೆಸರು ಬದಲಾಯಿಸಿದವರು. ನರಿ : ಇನ್ಯಾರು.. ಮನುಷ್ಯರು. ನಿಮ್ಮ ಹೆಸರು ಏನು ಅಂತಾ ಗೊತ್ತಾ ಮಹಾರಾಣಿಯವರೇ. ಸಿಂಹಿನಿ : ನನ್ನ ಹೆಸರು ಸಿಂಹಿನಿ. ನರಿ : ( ಮತ್ತೆ ಗಹಗಹಿಸಿ ನಕ್ಕು) ಅಲ್ಲಾ.. ನಿಮ್ಮ ಹೆಸರು ಸೀತಾ..‌ ಅದನ್ನೂ ಮನುಷ್ಯರೇ ನಾಮಕರಣ ಮಾಡಿದ್ದು. ಸಿಂಹ : (ಗರ್ಜಿಸಿ) ಅವರು ಏನಾದರೂ ಕರೆದುಕೊಳ್ಳಲಿ ನಮಗೇನು. ನಾವು ಸಿಂಹ ಅನ್ನುವುದು ಸುಳ್ಳೆನು? ನರಿ : ಹೌದೌದು.. ನೀವು ಸಿಂಹಗ

ಮತಾಂಧತೆ ಜೋರು! ಅಪರಾಧಿ ಯಾರು?

Image
ಪ್ರಹಸನ - 75 ಮತಾಂಧತೆ ಜೋರು! ಅಪರಾಧಿ ಯಾರು? ದೃಶ್ಯ 1.  ಮಂಗಳೂರಿನ ಕ್ರಿಶ್ಚಿಯನ್ ಸ್ಕೂಲ್. (7 ನೇ ಕ್ಲಾಸಿನ ವಿದ್ಯಾರ್ಥಿನಿಯರಿಗೆ ಶಿಕ್ಷಕಿಯೊಬ್ಬರು ರವೀಂದ್ರನಾಥ ಟಾಗೂರರ ಕವಿತೆ ಕುರಿತು ಪಾಠ ಮಾಡುತ್ತಿದ್ದಾರೆ) ಟೀಚರ್ : ನೋಡಿ ಮಕ್ಕಳೆ ದೇವರನ್ನು ಕಾಣುವುದು ಹೇಗೆ? ಪೂಜಿಸುವುದು ಹೇಗೆ? ಎಂಬುದನ್ನು ಈ ಕವಿತೆ ಹೇಳುತ್ತದೆ. ಕೇಳಿ. ತೊರೆದು ಬಿಡು ಆ ನಿನ್ನ ಮಂತ್ರಪಠಣಗಳನ್ನು ಸುಮ್ಮನೇ ಕುಳಿತುಕೊಳ್ಳಬೇಡ ದೇವರು ಗುಡಿ ಚರ್ಚು ಮಸೀದಿಗಳಲ್ಲಿಲ್ಲ ಕಣ್ಣನ್ನು ತೆರೆದು ನೋಡು  ಸ್ಟುಡೆಂಟ್ 1: ಮ್ಯಾಮ್.. ಗುಡಿಯಲ್ಲಿಯೇ ನೋ ಗಾಡ್ ಅಂದ್ರೆ ಮತ್ತೆಲ್ಲಿ ಗಾಡ್ ಇರ್ತಾರೆ? ಟೀಚರ್ : ಗುಡ್ ಕ್ವಶ್ಚನ್.  ನೇಗಿಲ ಯೋಗಿಯೊಳಗೆ ಇದ್ದಾನೆ ಕಠಿಣ ಪರಿಶ್ರಮದಲ್ಲಿದ್ದಾನೆ. ಸ್ಟುಡೆಂಟ್ 2 : ಹೋ ಮೈ ಗಾಡ್. ಟೀಚರ್ : ಯಸ್ ಡಿಯರ್ ದೇವರು ಶುದ್ದತೆಯ ಹೆಸರಲ್ಲಿ ಮೈಗೆ ಸ್ನಾನ ಮಾಡುವವರಲ್ಲಿಲ್ಲ ಮೌಢ್ಯ ಮಡಿವಂತಿಕೆಯಲ್ಲಿಲ್ಲ ಮೂಢ ಸಂಪ್ರದಾಯದಲ್ಲಿಲ್ಲ ಇಳಿದು ಬಾ ಈ ದೂಳಿನ ಮಣ್ಣಿಗೆ ಪರಿಶ್ರಮ ಪಟ್ಟು ಕಾಯಕ ಮಾಡಿದರೆ ದೇವರ ಕೃಪೆಗೆ ಪಾತ್ರವಾಗುವೆ.. ಸ್ಟೂಡೆಂಟ್ 1  : ರಿಯಲ್ಲಿ, ಮೈ ಗಾಡ್. ಐ ಕಾಂಟ್ ಬಿಲೀವ್ ದಿಸ್. ಟೀಚರ್ : ನೋ ಕ್ವಶ್ಚನ್ ಆಪ್ ಬಿಲೀವ್. ಇಟ್ಸ ಇನ್ ದಿಸ್ ಪೋಯೆಮ್. ದೃಶ್ಯ 2 :  ಮನೆ ಮದರು : ಬಂದ್ಯಾ ಬಾ. ಕೈಕಾಲು ಮುಖ ತೊಳೆದುಕೊಂಡು ಬೇಗ ಬಾ. ದೇವಸ್ಥಾನಕ್ಕೆ ಹೋಗಿ ಬರೋಣ. ಡಾಟರು : ನೋ ಮಮ್ಮಿ. ಟೀಚರ್ ಹೇಳಿದ್ದಾರೆ ದೇವಸ್ಥಾನದಲ